Dr. G. Parameshwar | ಹಣೆಬರಹ ಸರಿ ಇದ್ದಿದ್ರೆ 2013 ರಲ್ಲಿಯೇ ಸಿಎಂ ಆಗುತ್ತಿದೆ
ತುಮಕೂರು : ಹಣೆಬರಹ ಸರಿ ಇದ್ದಿದ್ರೆ 2013 ರಲ್ಲಿಯೇ ಮುಖ್ಯಮಂತ್ರಿ ಆಗುತ್ತಿದೆ ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಬೇಸರ ವ್ಯಕ್ತಪಡಿಸಿದರು.
ಕೊರಟಗೆರೆಯ ತಾಲೂಕಿನಲ್ಲಿ ತೋವಿನಿಕೆರೆಯಲ್ಲಿ ಮಾತನಾಡಿದ ಪರಮೇಶ್ವರ್, ಕ್ಷೇತ್ರದ ಜನರು ಎರಡು ಬಾರಿ ನನ್ನನ್ನು ಆಯ್ಕೆ ಮಾಡಿದ್ದಾರೆ. ಆದ್ರೆ ಒಳ್ಳೆ ಟೈಮ್ ನಲ್ಲಿ ಪಲ್ಟಿ ಹೊಡೆಸಿದ್ದಾರೆ.

2013 ರಲ್ಲಿ ಒಂದೇ ಒಂದು ಓಟ್ ನಲ್ಲಿ ನಾವು ಗೆದ್ದಿದ್ದರೇ ಈ ರಾಜ್ಯದ ಸಿಎಂ ಆಗುವ ಅವಕಾಶ ಇತ್ತು.
ಆದರೆ ನನ್ನ ಹಣೆಬರಹ ಇರಬೇಕಲ್ಲಾ, ಹಣೆ ಬರಹ ಬಹುಶಃ ನನಗಿರಲಿಲ್ಲ ಅಂತಾ ಕಾಣಿಸುತ್ತೆ ಎಂದು ಬೇಸರ ಹೊರಹಾಕಿದ್ದಾರೆ.
2013ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಡಾ.ಜಿ.ಪರಮೇಶ್ವರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದರು.
ಆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬಹುಮತ ಸಾಧಿಸಿತ್ತು.








