A young woman was raped by a policeman
ಚಿತ್ರದುರ್ಗದ ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಸಿಪಿಐಯಾಗಿ ಕಾರ್ಯನಿರ್ವಹಿಸುತ್ತಿರುವ ಜಿ.ಬಿ ಉಮೇಶ್ ಎಂಬುವವರ ವಿರುದ್ಧ ಅತ್ಯಾಚಾರದ ಪಕರಣ ದಾಖಲಾಗಿದೆ .
5 ವರ್ಷದ ಹಿಂದೆ ದಾವಣಗೆರೆಯಲ್ಲಿ ಉಮೇಶ್ ಇನ್ಸ್ ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾಗ ಶಿವಮೊಗ್ಗದಲ್ಲಿ ಬಿಇಡಿ ಓದುತ್ತಿದ್ದ ಯುವತಿಯೋಬ್ಬಳು ದಾವಣಗೆರೆಯ ನಿವೇಶನದ ಸಮಸ್ಯೆ ಕುರಿತು ಸಹಾಯ ಅರಸಿ ಬಂದಿದ್ದಳು. ಠಾಣೆಗೆ ಬಂದಾಗ ಪರಿಚಯವಾಗಿದ್ದ ಇನ್ಸ್ ಪೆಕ್ಟರ್ ಉಮೇಶ್ ಸ್ನೇಹ ಸಂಬಂಧ ಬೆಳಸಿದ್ದ.
ಇನ್ಸ್ ಪೆಕ್ಟರ್ ಉಮೇಶ್ ಯುವತಿಯ ಸೋದರ ಮಾವನ ಮಗನಾಗಿದ್ದಾನೆ. ವಿಚಾರಣೆ ಕುರಿತು ದಾವಣಗೆರೆಗೆ ಕರೆಸಿಕೊಂಡು ಅತ್ಯಾಚಾರ ಎಸಗಿದ್ದಾರೆ ಎಂದು ಯುವತಿ ಆರೋಪಿಸಲಾಗಿದೆ. ಉಮೇಶ ಕರೆದಾಗ ಹೋಗದಿದ್ದಕ್ಕೆ ಶಿವಮೊಗ್ಗಕ್ಕೆ ಬಂದು ಬಲತ್ಕಾರ ಮಾಡಿದ್ದ. ಗರ್ಭವತಿಯಾದ ಯುವತಿಗೆ ಐದು ಸಲ ಯುವತಿಗೆ ಗರ್ಭಪಾತ ಮಾಡಿಸಿರುವ ಆರೋಪವೂ ಕೇಳಿಬಂದಿದೆ. ಈಗ ಯುವತಿಯು ಉಮೇಶ್ ವಿರುದ್ಧ ಚಿತ್ರದುರ್ಗಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ.
ಈಗಾಗಲೇ ಸಿಪಿಐ ಉಮೇಶ್‍ಗೆ ಇಬ್ಬರು ಹೆಂಡತಿಯರಿದ್ದೂ. ಯುವತಿಯನ್ನು 3ನೇ ಪತ್ನಿಯಾಗಿ ಇರುವಂತೆ ಸಿಪಿಐ ಉಮೇಶ್ ಒತ್ತಡ ಹೇರಿದ್ದ. ದಾವಣಗೆರೆಯ ನಿವೇಶನ ನಿನಗೆ ಸಿಗದಂತೆ ಮಾಡುತ್ತೇನೆ. ನಿಮ್ಮ ತಂದೆ-ತಾಯಿಯ ಬದುಕು ಬೀದಿಗೆ ತರುತ್ತೇನೆಂದು ಪ್ರಾಣ ಬೆದರಿಕೆ ಹಾಕಿರುವುದಾಗಿ ಯುವತಿ ಪ್ರಕರಣದಲ್ಲಿ ಆರೋಪಿಸಿದ್ದಾಳೆ.
ಸಿಪಿಐ ಜಿ.ಬಿ ಉಮೇಶ್ ವಿರುದ್ದ ಕಲಂ 376 ಕ್ಲಾಸ್ (2)(ಞ)(ಟಿ), 323 (ಗಾಯಗೊಳಿಸುವುದು), 504 (ಉದ್ದೇಶಪೂರ್ವಕ ಅವಮಾನ), 506 (ಅಪರಾಧ ಬೆದರಿಕೆ) ಐಪಿಸಿ ಅಡಿ ಪ್ರಕರಣ ದಾಖಲು ಮಾಡಲಾಗಿದೆ. ಪ್ರಕರಣ ದಾಖಲಾದ ಬಳಿಕ ಸಿಪಿಐ ಜಿ.ಬಿ.ಉಮೇಶ್ ನಾಪತ್ತೆಯಾಗಿದ್ದಾನೆ ಎಂದು ತಿಳಿದು ಬಂದಿದೆ.








