karnataka congress | ಬಸವರಾಜ ಬೊಮ್ಮಾಯಿ ಸರ್ಕಾರಕ್ಕೆ ಲಜ್ಜೆ ಇಲ್ಲ
ಬೆಂಗಳೂರು : ದೀಪಾವಳಿ ಹಿನ್ನೆಲೆಯಲ್ಲಿ ಕೆಲಸ ಮುಗಿಸಿ ಖುಷಿಯಾಗಿ ಊರಿನತ್ತ ಬೈಕ್ ನಲ್ಲಿ ತೆರಳುತ್ತಿದ್ದ ಕೂಲಿ ಕಾರ್ಮಿಕ ರಸ್ತೆ ಗುಂಡಿ ತಪ್ಪಿಸಲು ಹೋಗಿ ಕ್ಯಾಂಟರ್ ಲಾರಿ ಚಕ್ರಕ್ಕೆ ಸಿಲುಕಿ ಅಸುನೀಗಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ರಸ್ತೆ ಗುಂಡಿಗೆ ಬಿದ್ದು ಕತ್ತು ಮತ್ತು ಭುಜದ ಮೂಳೆ ಮುರಿದುಕೊಂಡ ಬೈಕ್ ಸವಾರರೊಬ್ಬರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್ ಕಿಡಿಕಾರಿದ್ದು, ರಸ್ತೆ ಗುಂಡಿಗಳು ಜನರ ಜೀವ ಹಿಂಡುತ್ತಿರುವುದು ದಿನನಿತ್ಯದ ಸುದ್ದಿಯಾಗಿದೆ.ಸರ್ಕಾರ ಮಾತ್ರ ಕಣ್ಮುಚ್ಚಿ ಕುಳಿತಿದೆ. ಬೆಂಗಳೂರಿನ ರಸ್ತೆಗಳಲ್ಲಿ ಗುಂಡಿಗಳಿದೆಯೇ ಅಥವಾ ಗುಂಡಿಯಲ್ಲೇ ರಸ್ತೆ ಇದೆಯೇ ಎಂಬ ಅನುಮಾನ ಮೂಡುತ್ತಿದೆ! ರಸ್ತೆ ಗುಂಡಿಯಿಂದಾದ ಸಾವುಗಳನ್ನು “ಸರ್ಕಾರಿ ಕೊಲೆ” ಎಂದೇ ಪರಿಗಣಿಸಬೇಕು. ಬಿಜೆಪಿ ಆಡಳಿತದ ಚಿನ್ನದ ರಸ್ತೆಗಳಲ್ಲಿ ಜನ ರಕ್ತ ಸುರಿಸುತ್ತಿದ್ದಾರೆ.

ಬಸವರಾಜ ಬೊಮ್ಮಾಯಿ ಅವರೇ,ಚಿನ್ನದ ರಸ್ತೆಗಳಲ್ಲಿ ಆದ ಅಪಘಾತಗಳಿಗೆ ಸರ್ಕಾರವೇ ಸಂಪೂರ್ಣ ಚಿಕಿತ್ಸೆ ವೆಚ್ಚ ಭರಿಸಬೇಕು, ಸಾವುಗಳಿಗೆ 50 ಲಕ್ಷ ಪರಿಹಾರ ಒದಗಿಸಬೇಕು, ಕುಟುಂಬಸ್ಥರಿಗೆ ಸರ್ಕಾರಿ ನೌಕರಿ ನೀಡಬೇಕು. ಏಕೆಂದರೆ ಇವು ಸರ್ಕಾರಿ ಕೊಲೆ ಎಂದು ಖಾರವಾಗಿ ಟೀಕೆ ಮಾಡಿದೆ.
ಇನ್ನು ಸ್ವತಃ ಪ್ರಧಾನಿ ಕಚೇರಿಯ ಆದೇಶಕ್ಕೇ ಕ್ಯಾರೇ ಎನ್ನದಷ್ಟು ಬಂಡತನಕ್ಕೆ ತಲುಪಿದೆ #40PercentSarkara ದ ಭ್ರಷ್ಟಾಚಾರ. ಕರ್ನಾಟಕದ ಅಧಿಕಾರಿಗಳೇ ಪ್ರಧಾನಿಗೆ ಭಯಪಡಿವುದಿಲ್ಲ ಎಂದಮೇಲೆ ಚೀನಾ ಭಯಪಡುವುದೇ ಬಿಜೆಪಿ. ಭ್ರಷ್ಟಾಚಾರಕ್ಕೆ ಪ್ರಧಾನಿ ಬಳಿ ಪರಿಹಾರವಿಲ್ಲ, ಬಸವರಾಜ ಬೊಮ್ಮಾಯಿ ಸರ್ಕಾರಕ್ಕೆ ಲಜ್ಜೆ ಇಲ್ಲ ಎಂದು ಇದರಿಂದ ತಿಳಿಯುತ್ತಿದೆ ಎಂದು ಕುಟುಕಿದೆ.








