Fire accident-ಅರುಣಾಚಲ ಪ್ರದೇಶದ ಅತ್ಯಂತ ಹಳೆಯ ಮಾರುಕಟ್ಟೆಯಲ್ಲಿ ಬೆಂಕಿ ಕಾಣಿಸಿಕೊಂಡು 700 ಅಂಗಡಿಗಳು ಸುಟ್ಟು ಕರಕಲಾಗಿವೆ .ಬೆಂಕಿಯನ್ನು ನಂದಿಸಲು ಮೂರು ಅಗ್ನಿಶಾಮಕಗಳು ಆಗಮೀಸಿದ್ದವು, ಅದರಲ್ಲಿ ಒಂದನ್ನು ಇಟಾನಗರದಿಂದ ತರಲಾಯಿತು ಮತ್ತು ಸತತ ಹಲವಾರು ಗಂಟೆಗಳ ಪ್ರಯತ್ನದ ನಂತರ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳವಾರ ಮುಂಜಾನೆ ಅರುಣಾಚಲ ಪ್ರದೇಶದ ರಾಜಧಾನಿ ಇಟಾನಗರ ಸಮೀಪದ ನಹರ್ಲಗುನ್ ದೈನಿಕ್ ಬಜಾರ್ನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು ಕನಿಷ್ಠ 700 ಅಂಗಡಿಗಳು ಸುಟ್ಟು ಭಸ್ಮವಾಗಿವೆ. ಬೆಳಗಿನ ಜಾವ ನಾಲ್ಕು ಗಂಟೆ ಸುಮಾರಿಗೆ ಬೆಂಕಿ ಅವಘಡದ ಮಾಹಿತಿ ಲಭ್ಯವಾಗಿದ್ದು. ಇದು ರಾಜ್ಯದ ಅತ್ಯಂತ ಹಳೆಯ ಮಾರುಕಟ್ಟೆಯಾಗಿದೆ ಮತ್ತು ಅರುಣಾಚಲ ಪ್ರದೇಶದ ರಾಜಧಾನಿ ಇಟಾನಗರದಿಂದ ಸುಮಾರು 14 ಕಿಮೀ ದೂರದಲ್ಲಿರುವ ನಹರ್ಲಗುನ್ನಲ್ಲಿರುವ ಅಗ್ನಿಶಾಮಕ ಠಾಣೆಯ ಸಮೀಪದಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದೀಪಾವಳಿ ಆಚರಣೆ ವೇಳೆ ಪಟಾಕಿ ಅಥವಾ ದೀಪಾಲಂಕಾರದಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಶಂಕಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಕ್ಷಣ ಆಗಮಿಸಿ ಕ್ರಮ ಕೈಗೊಂಡ ಅಗ್ನಿಶಾಮಕ ದಳದವರುರು ತೀವ್ರಕಾರ್ಯಾಚರಣೆ ನಡೆಸಿದರು ನಂತರ ಅಂಗಡಿಗಳು ಬಿದಿರು ಮತ್ತು ಮರದಿಂದ ಮಾಡಲ್ಪಟ್ಟಿದೆ ಮತ್ತು ಒಣ ಸಾಮಾನುಗಳಿಂದ ತುಂಬಿವೆ, ಆದ್ದರಿಂದ ಬೆಂಕಿ ವೇಗವಾಗಿ ಹರಡಿತು ಎಂದು ಹೇಳಿದ್ದರೆ. ಗಾಬರಿಗೊಂಡ ಅಂಗಡಿ ಮಾಲೀಕರು ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದರು ಆದರೆ ಸಿಲಿಂಡರ್ ಸ್ಫೋಟಗಳಿಂದ ಬೆಂಕಿಯು ಭೀಕರ ಸ್ವರೂಪವನ್ನು ಪಡೆಯಿತು.
ಬೆಂಕಿಯನ್ನು ನಂದಿಸಲು ಮೂರು ಅಗ್ನಿಶಾಮಕಗಳನ್ನು ಸೇವೆಯಲ್ಲಿ ತೊಡಗಿದ್ದವು, ಅದರಲ್ಲಿ ಒಂದನ್ನು ಇಟಾನಗರದಿಂದ ತರಲಾಯಿತು ಎಂದು ತಿಲಿದು ಬಂದಿದೆ .ಗಂಟೆಗಳ ಪ್ರಯತ್ನದ ನಂತರ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಬೆಂಕಿ ಅವಘಡದಿಂದ ಆಗಿರುವ ಹಾನಿಯನ್ನು ಅಂದಾಜಿಸಲಾಗುತ್ತಿದ್ದು, ಕೋಟ್ಯಂತರ ರೂಪಾಯಿ ನಷ್ಟ ಸಂಭವಿಸಿದೆ ಎಂದು ತಿಳಿದು ಬಂದಿದೆ .
ಅಗ್ನಿಶಾಮಕ ದಳದ ತನಿಖೆಯ ನಂತರವೇ ಬೆಂಕಿಯ ಕಾರಣ ತಿಳಿಯಲಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ರಾಜಧಾನಿ) ಜಿಮ್ಮಿ ಚಿರಂ ಹೇಳಿದ್ದಾರೆ. ಬೆಂಕಿ ತಗುಲಿರುವ ಬಗ್ಗೆ ಮಾಹಿತಿ ಪಡೆದು ಸಮೀಪದ ಅಗ್ನಿಶಾಮಕ ಠಾಣೆಗೆ ತಲುಪಿದರೂ ಸಿಬ್ಬಂದಿ ಯಾರೂ ಇರಲಿಲ್ಲ ಎಂದು ಅಂಗಡಿ ಮಾಲಿಕರು ಆರೋಪಿಸಿದ್ದಾರೆ.
ಅಗ್ನಿಶಾಮಕ ದಳದವರು ಬಂದಾಗ ನಂದಿಸುವ ಯಂತ್ರದಲ್ಲಿ ನೀರು ಇರಲಿಲ್ಲ ಎಂದು ಅಂಗಡಿಯ ಮಾಲಿಕರು ಹೇಳಿದರು. ಅಗ್ನಿಶಾಮಕ ದಳದ ಸಿಬ್ಬಂದಿ ನೀರು ತುಂಬಿಸಲು ಸ್ಥಳದಿಂದ ಬಹು ದೂರ ಹೋಗಬೇಕಾಯಿತು ನಂತರ ಬೆಳಗ್ಗೆ 5 ಗಂಟೆಗೆ ಮರಳಿಬಂದರು , ಅಷ್ಟರೊಳಗೆ ಮಾರುಕಟ್ಟೆಯ ಬಹುತೇಕ ಭಾಗ ಬೆಂಕಿಗೆ ಆಹುತಿಯಾಗಿತ್ತು ಎಂದು ಅಂಗಡಿಕಾರರು ಆರೋಪಿಸಿದ್ದಾರೆ.
ಅಗ್ನಿಶಾಮಕ ಸಿಬ್ಬಂದಿಯನ್ನು ಅಮಾನತುಗೊಳಿಸಲು ಆಗ್ರಹ
ನಹರ್ಲಗುನ್ ಬಜಾರ್ ಹಿತರಕ್ಷಣಾ ಸಮಿತಿ ಅಧ್ಯಕ್ಷ ಕಿಪಾ ನಾಯ್ ಮಾತನಾಡಿ, ಪೊಲೀಸರೂ ಕ್ರಮ ಕೈಗೊಂಡಿಲ್ಲ. ಕರ್ತವ್ಯ ನಿರ್ವಹಣೆಯಲ್ಲಿ ವಿಫಲರಾದ ಪ್ರತಿಯೊಬ್ಬರನ್ನು ವಜಾಗೊಳಿಸಬೇಕು. ರಾಜ್ಯ ಸರ್ಕಾರ ಮತ್ತು ACC&I ಸಹಯೋಗದಲ್ಲಿ ಮಾರುಕಟ್ಟೆಯನ್ನು ಪುನರ್ನಿರ್ಮಿಸಲಾಗುವುದು ಎಂದು ಇಟಾನಗರ ಶಾಸಕ ಟೆಚಿ ಕಾಸೊ ಸುದ್ದಿಗಾರರಿಗೆ ತಿಳಿಸಿದ್ದಾರೆ..








