ಪತ್ನಿ ಆತ್ಮಹತ್ಯೆ – ವಿಡಿಯೋ ಮಾಡಿದ ಪತಿ
ಕಾಪಾಡುವ ಪ್ರಯತ್ನ ಮಾಡದೇ ವಿಡಿಯೋ ಚಿತ್ರೀಕರಣ
ಉತ್ತರಪ್ರದೇಶದ ಗುಲ್ಮೊಹರ್ ನಲ್ಲಿ ಘಟನೆ
ಮೊದಲನೇ ಪ್ರಯತ್ನದಲ್ಲಿ ವಿಫಲ
ಎರಡನೇ ಬಾರಿಗೆ ನೇಣಿಗೆ ಶರಣಾದ ಪತ್ನಿ
ಸಾಮಾನ್ಯವಾಗಿ ಈಗಿನ ಸಮಯದಲ್ಲಿ ಹೇಗಾಗಿದೆ ಅಂದ್ರೆ ರಸ್ತೆಯಲ್ಲಿ ಜನ ಸಾಯ್ತಿದ್ರೂ ಸಹಾಯ ಮಾಡದೇ ವಿಡಿಯೋ ಮಾಡಿಕೊಳ್ತಾ ನಿಲ್ಲುವಂತಹ ಕಾಲವಾಗಿದೆ.. ಆದ್ರೆ ಇಲ್ಲೊಬ್ಬ ಮಹಿಳೆ ತನ್ನ ಪತಿಯ ಎದುರಿಗೇ ಆತ್ಮಹತ್ಯೆ ಮಾಡಿಕೊಂಡರೂ ಆತ ಮಾತ್ರ ಕೆಯನ್ನ ಕಾಪಾಡದೇ ವಿಡಿಯೋ ಮಾಡಿಕೊಂಡು ನಿಂತಿದ್ದಾನೆ.. ಅಂತಹ ಘಟನೆಯೊಂದು ಉತ್ತರಪ್ರದೇಶದಲ್ಲಿ ನಡೆದಿದೆ..
ಮಹಿಳೆಯು ಸೀಲಿಂಗ್ ಫ್ಯಾನ್ ಗೆ ನೇಣು ಹಾಕಿಕೊಳ್ಳಲು ಪ್ರಯತ್ನಿಸಿದ್ರೂ ಆಕೆಯನ್ನ ಳಿಸುವ ಬದಲಿಗೆ ವಿಡಿಯೋ ಮಾಡುತ್ತಾ ನಿಂತಿದ್ದ.. ಉತ್ತರ ಪ್ರದೇಶದ ಗುಲ್ಮೊಹರ್ ನಗರದಲ್ಲಿ ಈ ಘಟನೆ ನಡೆದಿದೆ. ಶೋಭಿತಾ ಆತ್ಮಹತ್ಯೆ ಮಾಡಿಕೊಂಡ ಮಹಿಳೆಯಾಗಿದ್ದಾರೆ.. ಆಕೆಯ ವಿಡಿಯೋ ಚಿತ್ರಿಸಿಕೊಂಡ ಪತಿಯ ಹೆಸರು ಸಂಜೀವ್ ಗುಪ್ತಾ…
ವೇಳೆ ಶೋಭಿತಾ ತನ್ನ ಮೊದಲ ಪ್ರಯತ್ನದಲ್ಲಿ ವಿಫಲಳಾದರೂ ಎರಡನೇ ಪ್ರಯತ್ನದಲ್ಲಿ ನೇಣು ಹಾಕಿಕೊಳ್ಳುವಲ್ಲಿ ಆಕೆ ಯಶಸ್ವಿಯಾಗುತ್ತಾಳೆ.
ಶೋಭೀತಾ ನೇಣು ಬಿಗಿದುಕೊಂಡು ಎಷ್ಟೇ ಒದ್ದಾಡುತ್ತಿದ್ದರೂ ಇದನ್ನು ವೀಡಿಯೋ ಮಾಡಿಕೊಳ್ಳುತ್ತಿದ್ದ ಸಂಜೀವ್ ವಿಕೃತಿ ಮೆರೆದಿದ್ದಾನೆ.. ಆಕೆಯನ್ನು ಕಡೆಪಕ್ಷ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಪ್ರಯತ್ನವನ್ನೂ ಮಾಡಿಲ್ಲ.. ಬಳಿಕ ಸಂಜೀವ್ ಶೋಭಿತಾಳ ತಂದೆ ರಾಜ್ ಕಿಶೋರ್ ಗುಪ್ತಾಗೆ ಕರೆ ಮಾಡಿ, ಶೋಭೀತಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಿದ್ದಾನೆ.
ಕಿಶೋರ್ ಗುಪ್ತಾ ಗುಲ್ಮೊಹರ್ ನಗರದಲ್ಲಿರುವ ಶೋಭಿತಾಳ ಮನೆಗೆ ಹೋಗಿದ್ದಾರೆ. ಈ ವೇಳೆ ಹಾಸಿಗೆಯ ಮೇಲೆ ಆಕೆಯ ಶವವನ್ನು ಕಂಡು ಆಘಾತಗೊಂಡಿದ್ದಾರೆ.. ಆ ವೇಳೆ ಸಂಜೀವ್ ವೀಡಿಯೋವನ್ನು ರಾಜ್ ಕಿಶೋರ್ ರಿಗೆ ತೋರಿಸಿದ್ದಾನೆ.
ಬಳಿಕ ಶೋಭಿತಾಳ ಕುಟುಂಬದವರು ಘಟನೆಗೆ ಸಂಬಂಧಿಸಿ ಹನುಮಂತ ನಗರ ಪೊಲೀಸರಿಗೆ ಮಾಹಿತಿ ನೀಡಿದ್ದು ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ.. ಸಂಜೀವ್ ನನ್ನ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ..
पति वीडियो बनाता रहा, पत्नी ने फांसी लगाकर दी जान। वायरल वीडियो कानपुर का है.@Uppolice #Kanpur #Lakshmi #Religion pic.twitter.com/Ujl3ep5wwH
— rajni singh (@imrajni_singh) October 26, 2022
#POLICE_COMMISSIONERATE_KANPUR_NAGAR के थाना हनुमंत विहार क्षेत्रान्तर्गत पति पत्नी के मध्य हुए विवाद के बाद पत्नी द्वारा आत्महत्या किए जाने व की गई कार्यवाही के सम्बन्ध में सहायक पुलिस आयुक्त बाबूपुरवा द्वारा दी गई बाइट। @Uppolice pic.twitter.com/mJDf1JPAtp
— POLICE COMMISSIONERATE KANPUR NAGAR (@kanpurnagarpol) October 26, 2022








