ಇಮೇಜ್ ಬ್ಲರ್ ಟೂಲ್ – ಬಳಕೆದಾರರಿಗೆ ಶಾಕ್
ಡೆಸ್ಕ್ಟಾಪ್ ಬಳಕೆದಾರರಿಗಾಗಿ ಈ ಸೌಲಭ್ಯ
ಬ್ಲರ್ ಸೈಜ್, ಎಫೆಕ್ಟ್ ಕೂಡ ಲಭ್ಯ
ಹೊಸ ಫೀಚರ್ ನೋಡಿ ಬಳಕೆದಾರರು ಖುಷ್
ಸೂಕ್ಷ್ಮ ವಿಚಾರಗಳ ಬ್ಲರ್ ಮಾಡಲು ಸಹಾಯಕಾರಿ
ಮೆಟಾ ಒಡೆತನದ Facebook , Whatsapp, Instagram ನಲ್ಲಿ ಆಗಾಗ ಅನೇಕ ಆಕರ್ಶಣೀಯ ಹಾಗೂ ಒಳ್ಳೆಯ ಫೀಚರ್ ಗಳನ್ನ ಬಳಕೆದಾರರಿಗೆ ನೀಡುತ್ತಾ ಈ ಆಪ್ ಗಳ ಬಳಕೆಯನ್ನ ಇನ್ನಷ್ಟು ಸುಲಭವಾಗುವಂತೆ ಮಾಡಲಾಗ್ತಿದೆ..
ಇನ್ನೂ ಹಲವಾರ ಫೀಚರ್ ಗಳು ಬರಲಿದ್ದು , ಇದರ ನಡುವೆಯೇ ಒಂದು ಫೀಚರ್ ಜನರಿಗೆ ಪರಿಚಯಿಸಿದೆ ಸಂಸ್ಥೆ.. ಇಮೇಜ್ ಬ್ಲರ್ ಟೂಲ್ ಟೂಲನ್ನ ಪರಿಚಯಿಸಿದೆ.. ವಾಟ್ಸ್ಆ್ಯಪ್ ತನ್ನ ಡೆಸ್ಕ್ಟಾಪ್ ಬಳಕೆದಾರರಿಗಾಗಿ ಚಾಟ್ನಲ್ಲಿ ಫೋಟೋವನ್ನು ಬ್ಲರ್ ಮಾಡಲು ವಿಶೇಷ ಟೂಲ್ ನೀಡುವ ಕೆಲಸದಲ್ಲಿ ನಿರತವಾಗಿದೆ..
ವಾಟ್ಸ್ಆ್ಯಪ್ ಡೆಸ್ಕ್ಟಾಪ್ ಬೀಟಾದಲ್ಲಿ ಇದು ಕಂಡುಬಂದಿದ್ದು, ಸೂಕ್ಷವಾದ ವಿಚಾರಗಳಲ್ಲಿ, ಫೋಟೋವನ್ನು ಬ್ಲರ್ ಮಾಡಲು ಈ ಟೂಲ್ ಸಹಾಯ ಮಾಡಲಿದೆ. ಇದರಲ್ಲಿ ಬ್ಲರ್ ಸೈಜ್, ಎಫೆಕ್ಟ್ ಕೂಡ ಇರಲಿದೆ ಎಂದು ಹೇಳಲಾಗಿದೆ.
ಈ ಮೂಲಕ ಅತಿ ಸೂಕ್ಷವಾದ ವಿಚಾರವನ್ನು ನೀವು ವಾಟ್ಸ್ಆ್ಯಪ್ನಲ್ಲಿ ಇತರರಿಗೆ ಕಳುಹಿಸುವಾಗ ಬ್ಲರ್ ಮಾಡಿ ಸೆಂಡು ಮಾಡಬಹುದು. ವಾಟ್ಸ್ಆ್ಯಪ್ ತನ್ನ ಮುಂದಿನ ಅಪ್ಡೇಟ್ನಲ್ಲಿ ಮೊಬೈಲ್ ಬಳಕೆದಾರರಿಗೆ ಕಳುಹಿಸಿದ ಮೆಸೇಜ್ ಅನ್ನು ಎಡಿಟ್ ಮಾಡುವ ಆಯ್ಕೆ ನೀಡಲಿದೆ.
ಈ ಬಗ್ಗೆ ವಾಬೇಟಾಇನ್ಫೊ ವರದಿ ಮಾಡಿದ್ದು, ವಾಟ್ಸ್ಆ್ಯಪ್ ಸದ್ಯದಲ್ಲೇ ಎಡಿಟ್ ಮೆಸೇಜ್ ಆಯ್ಕೆಯನ್ನು ನೀಡಲಿದೆ ಎಂದು ಹೇಳಿದೆ. ಬಳಕೆದಾರರು ಇತರರಿಗೆ ಮೆಸೇಜ್ ಮಾಡುವ ಸಂದರ್ಭ ಅಕ್ಷರ ತಪ್ಪಿ ಸೆಂಡ್ ಮಾಡಿದ್ದರೆ ಪುನಃ ಅದನ್ನು ಸರಿಗೊಳಿಸಲು ಇದು ಸಹಕಾರಿ ಮಾಡಲಿದೆ.
ಸದ್ಯಕ್ಕೆ ಈ ಆಯ್ಕೆ ಆಂಡ್ರಾಯ್ಡ್ ಬೇಟಾ ವರ್ಷನ್ನಲ್ಲಿ ಲಭ್ಯವಿದೆ. ಈಗಾಗಲೇ ಇರುವ ಡಿಲೀಟ್ ಫಾರ್ ಎವರಿವನ್ ಆಯ್ಕೆ ಸಂಪೂರ್ಣ ಮೆಸೇಜ್ ಅನ್ನು ಡಿಲೀಟ್ ಮಾಡುತ್ತದೆ.
ಆದರೆ, ಈ ಎಡಿಟ್ ಆಯ್ಕೆಯಲ್ಲಿ ಮೆಸೇಜ್ ಅನ್ನು ಡಿಲೀಟ್ ಮಾಡುವ ಬದಲು ಅಕ್ಷರವನ್ನು ಸರಿಪಡಿಸುವುದಾಗಿದೆ. ಈಗಾಗಲೇ ಅನೇಕ ಫೀಚರ್ಗಳು ಪರೀಕ್ಷಾ ಹಂತದಲ್ಲಿದ್ದು ಸದ್ಯದಲ್ಲೇ ಎಡಿಟ್ ಆಯ್ಕೆ, ಗ್ರೂಪ್ ಅಡ್ಮಿನ್ ಗೆ ಮೆಸೇಜ್ ಡಿಲೀಸ್ ಮಾಡುವ ಆಯ್ಕೆ, ಲಾಗೌಟ್ ಆಯ್ಕೆ ಹೀಗೆ ಅನೇಕ ಫೀಚರ್ಗಳು ಬರುವುದರಲ್ಲಿದೆ.








