suryakumar ರಿಜ್ವಾನ್ ಗೆ ಶಾಕ್… ಮೊದಲ ಸ್ಥಾನಕ್ಕೆ ನುಗ್ಗಿ ಬಂದ ಸೂರ್ಯ
ಆಸ್ಟ್ರೇಲಿಯಾದ ಸಿಡ್ನಿ ವೇದಿಕೆಯಾಗಿ ನಡೆದ ನೆದರ್ ಲ್ಯಾಂಡ್ ವಿರುದ್ದದ ಪಂದ್ಯದಲ್ಲಿ ಟೀಂ ಇಂಡಿಯಾ 59 ರನ್ ಗಳಿಂದ ಗೆಲುವು ಸಾಧಿಸಿದೆ.
ಈ ಪಂದ್ಯದಲ್ಲಿ ಟೀಂ ಇಂಡಿಯಾದ ಬ್ಯಾಟರ್ ಸೂರ್ಯ ಕುಮಾರ್ ಯಾದವ್ ಕೇವಲ 25 ಎಸೆತಗಳಲ್ಲಿ 51 ರನ್ ಗಳಿಸಿ ಅಜೇಯರಾಗುಳಿದರು.
ಸೂರ್ಯ ಕುಮಾರ್ ಇನ್ನಿಂಗ್ಸ್ ನಲ್ಲಿ ಏಳು ಬೌಂಡರಿ, ಒಂದು ಸಿಕ್ಸರ್ ಇದೆ.
ಈ ಅರ್ಧಶತಕದೊಂದಿಗೆ ಸೂರ್ಯ ಕುಮಾರ್ ಯಾದವ್ ಪಾಕಿಸ್ತಾನ ಕ್ರಿಕೆಟ್ ತಂಡ ವಿಕೆಟ್ ಕೀಪರ್ ರಿಜ್ವಾನ್ ಅವರನ್ನ ಹಿಂದಿಕ್ಕಿದ್ದಾರೆ.
ಈ ಕ್ಯಾಲೆಂಡರ್ ವರ್ಷದಲ್ಲಿ ಟಿ 20 ಕ್ರಿಕೆಟ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಆಗಿ ಸೂರ್ಯ ಮೊದಲ ಸ್ಥಾನದಲ್ಲಿದ್ದಾರೆ.
ಈ ವರ್ಷ ಸೂರ್ಯ 867 ರನ್ ಗಳಿಸಿದ್ದಾರೆ. ಪಾಕ್ ಕ್ರಿಕೆಟರ್ ರಿಜ್ವಾನ್ ಇಲ್ಲಿಯವರೆಗೂ ಈ ವರ್ಷ 825 ರನ್ ಗಳನ್ನು ಗಳಿಸಿದ್ದಾರೆ.
ಸೂರ್ಯ ತನ್ನ ಈ ಇನ್ನಿಂಗ್ಸ್ ನೊಂದಿಗೆ ಈ ವರ್ಷ ಟಿ 20ಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಆಗಿದ್ದಾರೆ.