Congress – ಸುನಿಲ್ ಕುಮಾರ್ ಅವರೇ ನಿಮ್ಮದು ಸೆಲೆಕ್ಟೆಡ್ ಸಂಸ್ಕೃತಿ ರಕ್ಷಣೆಯೇ?
ಬೆಂಗಳೂರು : ಡಾಲಿ ಧನಂಜಯ್ ನಟನೆಯ ಹೆಡ್ ಬುಷ್ ಸಿನಿಮಾದ ವಿವಾದ ಇದೀಗ ರಾಜಕೀಯ ತಿರುವು ಪಡೆದುಕೊಂಡಿದೆ.
ಸಿನಿಮಾದಲ್ಲಿನ ವಿವಾದ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಸಚಿವ ಸುನಿಲ್ ಕುಮಾರ್ ಅವರಿಗೆ ರಾಜ್ಯ ಕಾಂಗ್ರೆಸ್ ಸರಣಿ ಪ್ರಶ್ನೆಗಳನ್ನು ಕೇಳಿದೆ.
ಈ ಕುರಿತು ಟ್ವೀಟ್ ಮಾಡಿರುವ ಸುನಿಲ್ ಕುಮಾರ್, ಹೆಡ್ ಬುಷ್ ಚಿತ್ರದಲ್ಲಿ ಇಲ್ಲದ ವಿವಾದ ಕಣ್ಣಿಗೆ ಬೀಳುತ್ತಲೇ ಹೆಡೆ ಎತ್ತಿ ಬುಸ್ ಬುಸ್ ಎನ್ನಲು ಹೊರಟಿರುವ ಸುನಿಲ್ ಕುಮಾರ್ ಅವರೇ, ಪಠ್ಯಪುಸ್ತಕದಲ್ಲಿ, ಗಣರಾಜ್ಯೋತ್ಸವ ಪರೇಡ್‌ನಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ಅವಮಾನವಾದಾಗ ನಿಮ್ಮೊಳಗಿನ ಸಂಸ್ಕೃತಿ ವೀರ ಹೆಡೆ ಎತ್ತಲಿಲ್ಲವೇಕೆ? ನಿಮ್ಮದು ಸೆಲೆಕ್ಟೆಡ್ ಸಂಸ್ಕೃತಿ ರಕ್ಷಣೆಯೇ?
https://twitter.com/INCKarnataka/status/1585885114692927488?s=20&t=Y7jiOT2hYX4xrHOT8xcSxg
ಕೆಲಸವಿಲ್ಲದವ ಮಂಗನ ಜೊತೆ ಆಡಲು ಹೊರಟಂತೆ ಸಚಿವ ಸುನಿಲ್ ಕುಮಾರ್ ಅವರು ಇಲ್ಲದ ವಿವಾದ ಸೃಷ್ಟಿಸಿ ಮೈಲೇಜ್ ಪಡೆಯಲು ಹೊರಟಿದ್ದಾರೆ.
ಪಠ್ಯದಲ್ಲಿ ಸುರಪುರದ ವೀರರಿಗೆ ಅವಮಾನವಾದಾಗ ಎಲ್ಲಿ ಹೋಗಿದ್ದರು? ತಮ್ಮ ಇಂಧನ ಇಲಾಖೆಯ ಅಕ್ರಮಗಳನ್ನು ತಡೆಯಲು, ಅವ್ಯವಸ್ಥೆ ನಿವಾರಿಸಲು ಆಸಕ್ತಿ ಇಲ್ಲವೇಕೆ? ವಿವಾದಗಳಿಗೆ ಮಾತ್ರ ಇವರ ಆಸಕ್ತಿಯೇ ಎಂದು ಸರಣಿ ಪ್ರಶ್ನೆಗಳನ್ನು ಕೇಳಿದೆ.
https://twitter.com/INCKarnataka/status/1585882777295409152?s=20&t=Y7jiOT2hYX4xrHOT8xcSxg
ಅಲ್ಲದೆ ಬಳ್ಳಾರಿಯಲ್ಲಿ ವಿದ್ಯುತ್ ಸರಬರಾಜು ಕೇಂದ್ರದಲ್ಲಿ ಒಳಚರಂಡಿ ನೀರು ನಿಂತು ಅಪಾಯಕ್ಕೆ ಆಹ್ವಾನ ನೀಡುತ್ತಿದೆ.

ಸಿನೆಮಾ ಒಂದನ್ನು ಹಿಡಿದು ವಿವಾದ ಸೃಷ್ಟಿಸಲು ಯತ್ನಿಸುವ ಇಂಧನ ಸಚಿವ ಸುನಿಲ್ ಕುಮಾರ್ ಅವರಿಗೆ ತಮ್ಮ ಇಲಾಖೆಯ ಇಂತಹ ಅವ್ಯವಸ್ಥೆ ಗಮನಿಸುವುದಿಲ್ಲವೇ? ಸಚಿವರೇ, ಮೊದಲು ನಿಮ್ಮ ಜವಾಬ್ದಾರಿಯನ್ನ ಸರಿಯಾಗಿ ನಿರ್ವಹಿಸುವುದನ್ನು ಕಲಿಯಿರಿ ಎಂದು ಕಾಂಗ್ರೆಸ್ ಕುಟುಕಿದೆ.








