Shoaib Akhtar – ಬಾಬರ್ ಕೆಲಸಕ್ಕೆ ಬಾರದ ಕ್ಯಾಪ್ಟನ್
ಟಿ 20 ವಿಶ್ವಕಪ್ ಭಾಗವಾಗಿ ಗುರುವಾರ ನಡೆದ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಪಾಕಿಸ್ತಾನ ತಂಡ ಹೀನಾಯವಾಗಿ ಸೋಲುಂಡಿದೆ.
ಇದರೊಂದಿಗೆ ಮೆಗಾ ಟೂರ್ನಿಯಲ್ಲಿ ಪಾಕಿಸ್ತಾನ ತಂಡ ಬ್ಯಾಕ್ ಟು ಬ್ಯಾಕ್ ಎರಡು ಸೋಲುಗಳನ್ನು ಕಂಡಿದೆ.
ಹೀಗಾಗಿ ಪಾಕಿಸ್ತಾನ ತಂಡದ ದಿಗ್ಗಜ ಶೋಯೆಬ್ ಅಖ್ತರ್, ಪಾಕಿಸ್ತಾನ ತಂಡದ ಕ್ಯಾಪ್ಟನ್ ಬಾಬರ್ ಅಜಂ ಅವರ ಕ್ಯಾಪ್ಟನ್ಸಿ ಬಗ್ಗೆ ಬೇಸರ ಹೊರಹಾಕಿದ್ದಾರೆ.
ತಮ್ಮ ಯೂಟ್ಯೂಬ್ ಚಾನಲ್ ನಲ್ಲಿ ಮಾತನಾಡಿದ ಅಖ್ತರ್, ಪಾಕಿಸ್ತಾನ ತಂಡದ ಟಾಪ್ ಆರ್ಡರ್, ಮಿಡಿಲ್ ಆರ್ಡರ್ ಚೆನ್ನಾಗಿಲ್ಲ.
ಈ ಬಗ್ಗೆ ನಾನು ಬಾರಿ ಹೇಳಿದ್ದೇನೆ. ಪಾಕಿಸ್ತಾನ್ ಗೆ ಒಬ್ಬ ಕೆಟ್ಟ ಕ್ಯಾಪ್ಟನ್ ಇದ್ದಾನೆ.
ಈ ಟೂರ್ನಿಯಲ್ಲಿ ಕ್ಯಾಪ್ಟನ್ ನಿರ್ವಹಣೆ ಚೆನ್ನಾಗಿಲ್ಲ. ವಿಶ್ವಕಪ್ ನಿಂದ ಪಾಕಿಸ್ತಾನ ಹೊರಬಿದ್ದಂತೆ.
ಆಡಿದ್ದು ಸಾಕು ಮನೆಗೆ ಬಂದು ಬಿಡಿ ಎಂದು ಹೇಳಿದ್ದಾರೆ.
ಜಿಂಬಾಬ್ವೆ ವಿರುದ್ಧ ಸೋತ ನಿಮ್ಮ ಆಟ ಹೇಗಿದೆ ಅಂತಾ ಎಲ್ಲರೂ ಗೊತ್ತಾಗಿದೆ.
ಈಗಲಾದರೂ ತಂಡದ ಮ್ಯಾನೇಜ್ ಮೆಂಟ್ ಗೆ ಜ್ಞಾನೋದಯ ಆಗುತ್ತೋ ಇಲ್ವೋ ನನಗೆ ಅರ್ಥವಾಗುತ್ತಿಲ್ಲ ಎಂದು ಅಖ್ತರ್ ಹೇಳಿದ್ದಾರೆ.
ಟೀಂ ಮ್ಯಾನೇಜ್ ಮೆಂಟ್ ಗೆ ತಲೆ ಇಲ್ಲ. ಕೇವಲ ಮೂವರು ವೇಗಿಗಳು, ಸರಿಯಾದ ಮಿಡಲ್ ಆರ್ಡರ್ ಬ್ಯಾಟರ್ ಗಳೊಂದಿಗೆ ಮೈದಾನಕ್ಕೆ ಇಳಿಯಬೇಕು.
ಇನ್ನು ಬಾಬರ್ ಫಸ್ಟ್ ಡೌನ್ ನಲ್ಲಿ ಬ್ಯಾಟಿಂಗ್ ಗೆ ಬರಬೇಕು.
ಪವರ್ ಪ್ಲೇನಲ್ಲಿ ಅದ್ಭುತ ಆರಂಭ ನೀಡುವಂತಹ ಬ್ಯಾಟರ್ ಗಳು ಬೇಖು. ಫಖರ್ ಜಮಾನ್ ಗೆ ಅವಕಾಶ ನೀಡಬೇಕು ಎಂದು ಅಖ್ತರ್ ಹೇಳಿದ್ದಾರೆ.