World Cup 2022 : ಶ್ರೀಲಂಕಾ ಬಿಗಿ ಬೌಲಿಂಗ್ ಗೆ, ಆರಂಭದಲ್ಲಿ ಕುಸಿದ ನ್ಯೂಜಿಲೆಂಡ್
ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ 20ವಿಶ್ವಕಪ್ ನಲ್ಲಿ ಇಂದು ನ್ಯೂಜಿಲೆಂಡ್ ಮತ್ತು ಶ್ರೀಲಂಕಾ ತಂಡಗಳು ಮುಖಾಮುಖಿಯಾಗುತ್ತಿವೆ. ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದೆ.
ನ್ಯೂಜಿಲೆಂಡ್ ಗೆ ಆರಂಭಿಕ ಆಘಾತ ಉಂಟಾಗಿದೆ. ಪವರ್ ಪ್ಲೇ ಒಳಗಡೆ 3 ವಿಕೆಟ್ ಕಳೆದುಕೊಂಡಿದ್ದು. ಕೇವಲ 25 ರನ್ ಗಳಿಸಿದೆ. ಫೀನ್ ಅಲೆನ್ ಡೇವಿಡ್ ಕಾನ್ವೆ ನಾಯಕ ಕೇನ್ ವಿಲಿಯಂಸನ್ ಎರಡಂಕಿ ದಾಟುವ ಮುನ್ನವೇ ಔಟ್ ಆಗಿದ್ದಾರೆ. ಸಧ್ಯ ಗ್ಲೇನ್ ಫಿಲಿಪ್ಸ್ ಮತ್ತು ಡೇರಿಯಲ್ ಮಿಚಲ್ ಕ್ರೀಸ್ ಕಾಯ್ದುಕೊಂಡಿದ್ದಾರೆ.
ನ್ಯೂಜಿಲೆಂಡ್ ಮತ್ತು ಶ್ರೀಲಂಕಾ ತಂಡಗಳು 2014 ರ ನಂತರ ಮೊದಲ ಬಾರಿಗೆ ಟಿ20ಐ ಟೂರ್ನಿಯಲ್ಲಿ ಮುಖಾಮುಖಿಯಾಗುತ್ತಿವೆ. ಉಭಯ ತಂಡಗಳ ನಡುವಿನ ಈ ಪಂದ್ಯ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿದೆ.
ಇದುವರೆಗೆ ಗ್ರೂಪ್-1 ರಲ್ಲಿ ಮೂರು ಪಂದ್ಯಗಳು ಮಳೆಯಿಂದಾಗಿ ರದ್ದಾಗಿದ್ದು, ಈ ಗುಂಪಿನ ಸಮೀಕರಣವನ್ನ ತಲೆಕೆಳಗೆ ಮಾಡಿದೆ. ಹೀಗಾಗಿ ಇಂದು ನ್ಯೂಜಿಲೆಂಡ್ ಮತ್ತು ಶ್ರೀಲಂಕಾ ನಡುವಿನ ಪಂದ್ಯ ಈ ಗುಂಪಿಗೆ ಮಹತ್ವದ ಪಂದ್ಯವಾಗಿದೆ.
World Cup 2022: New Zealand is three down, Sri Lanka rattling the Kiwis