ಅಕ್ಟೋಬರ್ 2023 ರ ವರೆಗೆ ಸಕ್ಕರೆ ರಫ್ತು ನಿಷೇಧಿಸಿದ ಕೇಂದ್ರ ಸರ್ಕಾರ…
ಸಕ್ಕರೆ ರಫ್ತಿನ ಮೇಲಿನ ನಿಷೇಧವನ್ನ ಭಾರತ ಸರ್ಕಾರ ಅಕ್ಟೋಬರ್ 2023 ರವರೆಗೆ ವಿಸ್ತರಿಸಿ ಆದೇಶಿಸಿದೆ. ದೇಶೀಯ ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಹಿಂದೆ 1 ಜೂನ್ 2022 ರಿಂದ 31 ಅಕ್ಟೋಬರ್ 2022 ರವರೆಗೆ ಸಕ್ಕರೆ ರಫ್ತುಗಳನ್ನು ನಿಷೇಧಿಸಲಾಗಿತ್ತು.
ಭಾರತ ವಿಶ್ವದ ಅತಿದೊಡ್ಡ ಸಕ್ಕರೆ ಉತ್ಪಾದಕ ದೇಶವಾಗಿದ್ದು, ಬ್ರೆಜಿಲ್ ನಂತರ ಎರಡನೇ ಅತಿದೊಡ್ಡ ರಫ್ತುದಾರ ಎನಿಸಿಕೊಂಡಿದೆ. ಬಾಂಗ್ಲಾದೇಶ, ಇಂಡೋನೇಷ್ಯಾ, ಮಲೇಷ್ಯಾ ಮತ್ತು ದುಬೈ ದೇಶಗಳು ಭಾರತೀಯ ಸಕ್ಕರೆಯ ಅತಿ ಹೆಚ್ಚು ಖರೀದಿದಾರರಾಗಿ ಗುರುತಿಸಿಕೊಂಡಿವೆ.
82 ಲಕ್ಷ ಮೆಟ್ರಿಕ್ ಟನ್ ಸಕ್ಕರೆ ರಫ್ತು
ಕಳೆದ ವರ್ಷದಲ್ಲಿ, ದೇಶ ಹೆಚ್ಚಿನ ಪ್ರಮಾಣದ ಸಕ್ಕರೆಯನ್ನು ರಫ್ತು ಮಾಡಿತ್ತು. 60 LMT (ಲಕ್ಷ ಮೆಟ್ರಿಕ್ ಟನ್) ವರೆಗೆ ಸಕ್ಕರೆ ರಫ್ತು ಮಾಡುವ ಗುರಿಯನ್ನು ನಿಗದಿಪಡಿಸಲಾಗಿತ್ತು, ಆದರೆ ವಾಸ್ತವದಲ್ಲಿ 70 LMT ಸಕ್ಕರೆ ರಫ್ತು ಮಾಡಲಾಗಿದೆ. ಅದೇ ರೀತಿ ಈ ವರ್ಷವೂ 82 LMT ಸಕ್ಕರೆಯನ್ನು ಸಕ್ಕರೆ ಕಾರ್ಖಾನೆಯಿಂದ ರಫ್ತು ಮಾಡಲಾಗಿದೆ. ಈ ವರ್ಷದ ಸಕ್ಕರೆ ರಫ್ತು ಇದುವರೆಗೆ ಅತ್ಯಧಿಕವಾಗಿದೆ ಎಂದು ಅಂದಾಜಿಸಲಾಗಿದೆ.
ಸಕ್ಕರೆ ರಫ್ತನ್ನು ಮಿತಿಗೊಳಿಸುವ ಸರ್ಕಾರದ ಯೋಜನೆಯು ತುಂಬಾ ಮುಂಜಾಗ್ರತಾ ಕ್ರಮವಾಗಿದೆ. ಕಾರಣ ಸಕ್ಕರೆಯ ದೇಶೀಯ ಪೂರೈಕೆಯು ಹೇರಳವಾಗಿದೆ. ಭಾರತೀಯ ಸಕ್ಕರೆ ಕಾರ್ಖಾನೆಗಳ ಸಂಘದ ಪ್ರಕಾರ, ಭಾರತವು ಈ ಋತುವಿನಲ್ಲಿ 35 ಮಿಲಿಯನ್ ಟನ್ ಸಕ್ಕರೆ ಉತ್ಪಾದಿಸುತ್ತದೆ ಮತ್ತು 27 ಮಿಲಿಯನ್ ಟನ್ಗಳನ್ನು ಸೇವಿಸುವ ನಿರೀಕ್ಷೆಯಿದೆ. ಕಳೆದ ಋತುವಿನ ಸುಮಾರು 8.2 ಮಿಲಿಯನ್ ಟನ್ ಮೀಸಲು ಸೇರಿದಂತೆ 16 ಮಿಲಿಯನ್ ಹೆಚ್ಚುವರಿ ಇದೆ.
ಗೋಧಿ ರಫ್ತಿನ ಮೇಲೂ ನಿಷೇಧ
ಹೆಚ್ಚುತ್ತಿರುವ ಗೋಧಿ ಬೆಲೆಗಳನ್ನು ಗಮನದಲ್ಲಿಟ್ಟುಕೊಂಡು ಭಾರತವು ಈ ವರ್ಷದ ಮೇ ತಿಂಗಳಲ್ಲಿ ಅದರ ರಫ್ತು ನಿಷೇಧಿಸಿತ್ತು. ಏರುತ್ತಿರುವ ದೇಶೀಯ ಬೆಲೆಗಳನ್ನು ನಿಯಂತ್ರಿಸುವ ಕ್ರಮಗಳ ಭಾಗವಾಗಿ ಭಾರತವು ಗೋಧಿ ರಫ್ತಿನ ಮೇಲೆ ನಿರ್ಬಂಧಗಳನ್ನು ವಿಧಿಸಿದೆ.
lndia Sugar Export Restrictions | Modi Govt Extends Sugar Exports Ban Till October 2023








