Krishna Byre Gowda – ಇನ್ಸ್ಪೆಕ್ಟರ್ ನಂದೀಶ್ ಅವರದ್ದು ಸಹಜ ಮರಣವಲ್ಲ
ಬೆಂಗಳೂರು : ಇನ್ಸ್ಪೆಕ್ಟರ್ ನಂದೀಶ್ ಅವರದ್ದು ಸಹಜ ಮರಣವಲ್ಲ, ಬಿಜೆಪಿಯ ಭ್ರಷ್ಟಾಚಾರಕ್ಕೆ ಆಗಿರುವ ಬಲಿ ಎಂದು ಮಾಜಿ ಸಚಿವ ಕೃಷ್ಣ ಬೈರೇಗೌಡ ಆರೋಪಿಸಿದ್ದಾರೆ.
ಇನ್ಸ್ಪೆಕ್ಟರ್ ನಂದೀಶ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿರುವ ಮಾಜಿ ಸಚಿವ ಕೃಷ್ಣ ಬೈರೇಗೌಡ, ಇನ್ಸ್ಪೆಕ್ಟರ್ ನಂದೀಶ್ ಅವರದ್ದು ಸಹಜ ಮರಣವಲ್ಲ, ಬಿಜೆಪಿಯ ಭ್ರಷ್ಟಾಚಾರಕ್ಕೆ ಆಗಿರುವ ಬಲಿ.
ಬಿಜೆಪಿ ಸಂಪುಟದ ಸಚಿವರೇ ಭ್ರಷ್ಟಾಚಾರ ನಡೆದಿರುವ ಸುಳಿವು ನೀಡಿದ್ದು, ಗೃಹ ಸಚಿವರೇ ಈ ಹತ್ಯೆಯ ಹೊಣೆಯನ್ನು ಹೊರಬೇಕು.
ಸತ್ಯಾಸತ್ಯತೆ ಬಯಲಾಗಬೇಕೆಂದರೆ ಪ್ರಕರಣವನ್ನ ನ್ಯಾಯಾಂಗ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.
ಇದೇ ವಿಚಾರವಾಗಿ ರಾಮಲಿಂಗಾರೆಡ್ಡಿ ಮಾತನಾಡಿದ್ದು, ರಾಜ್ಯ ಸರ್ಕಾರದ ವ್ಯಾಪ್ತಿಯ ಸಂಸ್ಥೆಗಳಿಂದ ತನಿಖೆಯಾದರೆ ಸತ್ಯಾಂಶ ಹೊರ ಬರುವುದಿಲ್ಲ.
ಇಂತಹ ಪ್ರಕರಣಗಳಲ್ಲಿ ನ್ಯಾಯ ಸಿಗಬೇಕಾದರೆ ನ್ಯಾಯಾಂಗ ತನಿಖೆ ಆಗಬೇಕು. ಆಗ ಮಾತ್ರ ಸತ್ಯಾಂಶ ಬೆಳಕಿಗೆ ಬರುತ್ತದೆ ಎಂದು ಒತ್ತಾಯಿಸಿದ್ದಾರೆ.
ಅಲ್ಲದೆ ನಂದೀಶ್ ಅವರಿಂದ ಯಾರೇ ಹಣ ಪಡೆದಿದ್ದರೂ ಈ ಸಮಯದಲ್ಲಿ ಅವರು ಹಿಂದಿರುಗಿಸಬೇಕು ಎಂದು ಆಗ್ರಹಿಸಿದ್ದಾರೆ.