ಇಂದು ಚಂದ್ರಶೇಖರ್ ಅಂತ್ಯಕ್ರಿಯೆ, ಕುಟುಂಬದಿಂದ ಕೊಲೆ ಆರೋಪ…
ಕಳೆದ ಐದು ದಿನಗಳಿಂದ ನಾಪತ್ತೆಯಾಗಿದ್ದ ಚಂದ್ರಶೇಖರ್ ನಿನ್ನೆ ಸಂಜೆ ಶವವಾಗಿ ಪತ್ತೆಯಾಗಿದ್ದಾರೆ. ರೇಣುಕಾಚಾರ್ಯ ತಮ್ಮನ ನಿಗೂಢ ಸಾವು ಪ್ರಕರಣಲ್ಲಿ ಹೊನ್ನಳ್ಳಿ ಪೊಲೀಸರು FIR ದಾಖಲಿಸಿಕೊಂಡಿದ್ದಾರೆ.
ಮೃತ ಚಂದ್ರಶೇಖರ್ ತಂದೆ MP ರಮೇಶ್ ದೂರಿನ ಮೇರೆಗೆ FIR ದಾಖಲು ಮಾಡಲಾಗಿದೆ. ಪೊಲೀಸರು IPC 302, 201ರಡಿ ಕೇಸ್ ದಾಖಲು ಮಾಡಿದ್ಧಾರೆ. ಅಪರಿಚಿತ ವ್ಯಕ್ತಿಗಳು ನನ್ನ ಮಗನ ಕೊಲೆ ಮಾಡಿದ್ದಾರೆ. ಕೊಲೆ ನಂತರ ಸಾಕ್ಷಿ ನಾಶ ಮಾಡಲು ನಾಲೆಗೆ ಕಾರು ತಳ್ಳಿದ್ದಾರೆ. ತನಿಖೆ ನಡೆಸಿ ನ್ಯಾಯ ಕೊಡಿಸಿ ಎಂದು ರಮೇಶ್ ದೂರು ನೀಡಿದ್ಧಾರೆ.
ಘಟನೆ ಬಗ್ಗೆ ಹೊನ್ನಳ್ಳಿ ಶಾಸಕ ರೇಣುಕಾಚಾರ್ಯ ಪ್ರತಿಕ್ರಿಯಿಸಿ “ಸಾವಿನ ಹಿಂದೆ ಕಾಣದ ಕೈಗಳು ಕೆಲಸ ಮಾಡಿವೆ ಹಣ ಕೇಳಿದ್ರೆ ನಾನು ಕೊಡ್ತಿದ್ದೆ, ಯಾರೋ ಕಿಡ್ನಾಪ್ ಮಾಡಿದ್ದಾರೆ. ಯಾರೋ ಫಾಲೋ ಮಾಡಿ ವ್ಯವಸ್ಥಿತವಾಗಿ ಹತ್ಯೆ ಮಾಡಿದ್ದಾರೆ ಎಂದು ರೇಣುಕಾಚಾರ್ಯ ಆರೋಪಿಸಿದ್ದಾರೆ.
ದಾವಣಗೆರೆ ಜಿಲ್ಲೆ ಹೊನ್ನಾಳಿ ನಿವಾಸದಲ್ಲಿ ಚಂದ್ರಶೇಖರ್ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಕುಂದೂರಲ್ಲಿ ಚಂದ್ರಶೇಖರ್ ಅಂತ್ಯಸಂಸ್ಕಾರಕ್ಕೆ ಕುಟುಂಬದ ಸದಸ್ಯರು ನಿರ್ಧರಿಸಿದ್ದಾರೆ.
M P renukacharya: Chandrasekhar’s funeral today, family alleges murder…
ಇದನ್ನೂ ಓದಿ – https://saakshatv.com/challakere-three…die-mysteriously/