Kantara ದೈವದ ರೀಲ್ಸ್ : ಧರ್ಮಸ್ಥಳಕ್ಕೆ ಬಂದು ತಪ್ಪು ಕಾಣಿಕೆ ಸಲ್ಲಿಸಿದ ಹೈದ್ರಾಬಾದ್ ಯುವತಿ..
ಕಾಂತಾರ ಚಿತ್ರದಲ್ಲಿ ಬರುವ ಪಂಜುರ್ಲಿ ದೈವದ ರೀತಿ ವೇಷ ಧರಿಸಿ ರೀಲ್ಸ್ ಮಾಡಿದ್ದ ತೆಲಂಗಾಣದ ಹೈದ್ರಾಬಾದನ ಯುವತಿ ಧರ್ಮಸ್ಥಳಕ್ಕೆ ಬಂದು ತಪ್ಪು ಕಾಣಿಕೆ ಸಲ್ಲಿಸಿದ್ದಾರೆ.
ಶ್ವೇತಾ ಎಂಬ ಯುವತಿ ಪಂಜುರ್ಲಿ ದೈವದ ರೀತಿ ಮುಖವರ್ಣೀಕೆ ಮಾಡಿಕೊಂಡು ರೀಲ್ಸ್ ಮಾಡಿದ್ದರು. ಇದಕ್ಕೆ ಭಾರಿ ವಿರೋಧ ವ್ಯಕ್ತವಾದ ಹಿನ್ನಲೆ ಯುವತಿ ಧರ್ಮಸ್ಥಳಕ್ಕೆ ಬಂದು ವೀರೇಂದ್ರ ಹೆಗಡೆಯವರ ಬಳಿ ಕ್ಷಮಾಪಣೆ ಕೇಳಿ ಆಶಿರ್ವಾದ ಪಡೆದಿದ್ದಾರೆ. ಈ ಘಟನೆ ನವೆಂಬರ್ 3 ರಂದು ನಡೆದಿದೆ.
ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಶ್ವೆತಾ, “ ಇದನ್ನ ನಾನು ತಿಳಿದು ಮಾಡಲಿಲ್ಲ. ಯಕ್ಷಗಾನ ಪಾತ್ರ ಮತ್ತು ಇದು ಇಂದೇ ಎಂದು ತಿಳಿದು ಮಾಡಿದೆ. ಟೀಕೆ ಗಳು ಬಂದ ಬಳಿಕ ಇದು ಬೇರೆ ಬೇರೆ ಎಂದು ತಿಳಿಯಿತು. ಸಮಸ್ತ ದೈವ ಆರಾಧಕರಲ್ಲಿ ಮತ್ತು ಜನತೆ ದಯವಿಟ್ಟು ಕ್ಷಮಿಸಿ ಎಂದು ಕೇಳಿಕೊಂಡಿರುವುದಾಗಿ ತಿಳಿಸಿದ್ದಾರೆ.
Kantara: Hyderabad lady came to Dharmsthala and made wrong offering..
ಇದನ್ನೂ ಓದಿ – https://saakshatv.com/twitter-elon-mus…-networking-site/








