Guleda Lakkamma-ಕಲಬುರಗಿಯ ಗುಳೇದ ಲಕ್ಕಮ್ಮ ಜಾತ್ರೆಯ ವಿಶೇಷವೇ ಬಗ್ಗೆ ನೀವು ತಿಳಿದು ಕೋಳಬೇಕು ಹೌದು ಈ ಜಾತ್ರೆಯವಿಷೇಶತೆ ಬಗ್ಗೆ ಇಲ್ಲಿದೆ..
ತೂಗು ಹಾಕಿರೋ ಚಪ್ಪಲಿಗಳು. ಅವುಗಳನ್ನ ಭಕ್ತಿಯಿಂದ ತಲೆಗೆ ಸವರಿಕೊಳ್ತಿರೋ ಭಕ್ತರು. ವಿಚಿತ್ರವೆನಿಸಿದರು ಸತ್ಯ ಜಾತ್ರೆ ಅಂದ್ಮೇಲೆ ಭಕ್ತರಿಗೆ ಕೊರತೆ ಇಲ್ಲ .
ಇಡೀ ಊರಿಗೆ ಊರೇ ಗುಳೇದ ಲಕ್ಕಮ್ಮ ಜಾತ್ರೆಗೆ ಒಂದಾಗ್ತದೆ. ಸಾವಿರಾರು ಭಕ್ತರು ಲಕ್ಕಮ್ಮ ದೇವರಿಗೆ ಪೂಜೆ ಸಲ್ಲಿಸುತ್ತಾರೆ. ಸಾಮಾನ್ಯವಾಗಿ ಎಲ್ಲಾ ದೇವರಿಗೆ ಮುಖಕ್ಕೆ ಪೂಜೆ ಸಲ್ಲಿಸಿದರೆ
ಈ ದೇವರ ವಿಶೇಷ ಪೂಜೆಯನ್ನು ಸಲ್ಲಿಸಲಾಗುತ್ತದೆ ಅಂದ್ರೆ ಗುಳೇದ ಲಕ್ಕಮ್ಮನಿಗೆ ಪೂಜೆ ಸಲ್ಲಿಸೋ ರೀತಿನೇ ಬೇರೆ. ಈ ಪದ್ದತಿಗೆ ಇತಿಹಾಸವಿದೆ ಅದೇನೆಂದರೆ ಮಾಂಸಾಹಾರ ಸೇವಿಸಿದಳೆಂಬ ಕಾರಣಕ್ಕೆ ಧುತ್ತರಗಾಂವ ಗ್ರಾಮದ ಈರಣ್ಣನು ಲಕ್ಕಮ್ಮನ ಬೆನ್ನತ್ತಿ ಬಂದನಂತೆ. ಈರಣ್ಣನಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಓಡ್ತಾ ಬಂದ ಲಕ್ಕಮ್ಮ ಗೋಳಾ ಗ್ರಾಮದ ಬಳಿ ಪಲ್ಟಿಯಾಗಿ ಬಿದ್ದಳಂತೆ. ಹಾಗೆ ಲಕ್ಕಮ್ಮ ಬೋರಲು ಬಿದ್ದ ಸ್ಥಿತಿಯಲ್ಲಿಯೇ ಆಕೆಯನ್ನು ಪೂಜಿಸಲಾಗುತ್ತದೆ .ಹಾಗೂ ಅದೇ ರೀತಿ ಭಕ್ತರು ಪೂಜೆ ಸಲ್ಲಿಸುವ ಸಂಪ್ರದಾಯ ಮುಂದುವರೆಸಿಕೊಂಡು ಬಂದಿದ್ದಾರೆ.
ಲಕ್ಕಮ್ಮನಿಗೆ ರಕ್ತತರ್ಪಣ ಸಹ ನೇರವೇರುತ್ತದೆ ಇನ್ನು ಕೆಲವು ಭಕ್ತರು ಚಪ್ಪಲಿಗಳನ್ನು ಹರಕೆ ರೂಪದಲ್ಲಿ ನಸಲ್ಲಿಸುತ್ತಾರೆ. ಅಲ್ಲದೇ ತೂಗುಹಾಕುವ ಹರಕೆಯ ಚಪ್ಪಲಿಗಳಿಂದ ತಮ್ಮ ಮುಖ, ಮೈ ಕೈಗಳಿಗೆ ಸವರಿಕೊಳ್ಳುತ್ತಾರೆ.
ಸಸ್ಯಹಾರಿ ಭಕ್ತರು ಹೋಳಿಗೆ ಅರ್ಪಿಸುತ್ತಾರೆ ಮಾಂಸಾಹಾರಿ ಭಕ್ತರು ಕುರಿ ಮತ್ತು ಕೋಳಿಗಳನ್ನು ಬಲಿಕೊಟ್ಟು ಲಕ್ಕಮ್ಮನಿಗೆ ರಕ್ತತರ್ಪಣ ಮಾಡ್ತಾರೆ