ರಾಮ ಜನ್ಮಭೂಮಿಯಲ್ಲಿ ಮಂದಿರ ನಿರ್ಮಾಣಕ್ಕೆ ಈಗಾಗಲೇ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಕೋಟ್ಯಾಂತರ ಹಿಂದೂ ಸಮುದಾಯದ ಶ್ರೀರಾಮನ ಭಕ್ತರು ದೇಗುಲದ ನಿರ್ಮಾಣ ಕಾರ್ಯ ನೋಡಲು ಕಾದು ಕುಳಿತಿದ್ದಾರೆ. ಇತ್ತೀಚೆಗೆ ಕೇಂದ್ರ ಸರ್ಕಾರ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ನ ಒಂದನ್ನು ನಿರ್ಮಾಣ ಮಾಡಿ ತದನಂತರ ದೇವಾಲಯದ ನಿರ್ಮಾಣಕ್ಕೆ ನಿರ್ಧರಿಸಿತ್ತು. ಅದರಂತೆಯೇ ನಿರ್ಮಾಣವಾದ ಟ್ರಸ್ಟ್ ನಿಂದ ಇವತ್ತು ಮೊದಲ ಸಭೆ ನಡೆಯಲಿದೆ. ಇನ್ನು ಟ್ರಸ್ಟ್ನ ಅಧ್ಯಕ್ಷರಾಗಿರುವ ಹಿರಿಯ ವಕೀಲ ಕೆ.ಪರಾಶರನ್ ಅವರ ನಿವಾಸದಲ್ಲೇ ಈ ಸಭೆ ನಡೆಯಲಿದೆ ಎನ್ನಲಾಗುತ್ತಿದೆ. ಮಂದಿರ ನಿರ್ವಣದ ಶಂಕುಸ್ಥಾಪನೆಯ ಮುಹೂರ್ತದ ಬಗ್ಗೆ ಸೇರಿದಂತೆ ಹಲವು ಮಹತ್ವದ ನಿರ್ಧಾರ ಗಳನ್ನು ಈ ಸಭೆಯಲ್ಲಿ ಚರ್ಚೆ ಮಾಡಲು ನಿರ್ಧರಿಸಲಾಗಿದೆ. ಮುಖ್ಯವಾಗಿ ಮಂದಿರ ನಿರ್ಮಾಣಕ್ಕಾಗಿ ಬೇಕಾದ ಅಗತ್ಯ ಸಾಮಗ್ರಿಗಳು, ನಿಧಿ ಸಂಗ್ರಹ ಮತ್ತು ಮಂದಿರ ಕಾಮಗಾರಿ ಮುಗಿಯಬೇಕಾದ ದಿನಾಂಕ ಕುರಿತು ಸಭೆಯಲ್ಲಿ ಚರ್ಚಿಸಲು ನಿರ್ಧರಿಸಲಾಗಿದೆ. ದೇವಾಲಯ ನಿರ್ಮಾಣ ಕಾರ್ಯ ಕಾಲ ಮಿತಿಯಲ್ಲಿ ನಡೆಯಬೇಕು ಎಂಬುದಾಗಿ ಈ ಹಿಂದೆಯೇ ಪ್ರಧಾನಿ ಮೋದಿ ಜೀ ಹೇಳಿದ್ದರು. ಈ ಸಲಹೆಯನ್ನು ಟ್ರಸ್ಟ್ ಕೂಡ ಗಂಭೀರವಾಗಿ ಪರಿಗಣಿಸಿ ಕಾರ್ಯಾರಂಭ ಮಾಡಲು ನಿರ್ಧರಿಸಿಕೊಂಡಿದೆ. ಒಟ್ಟಿನಲ್ಲಿ ಈ ಸಭೆಯ ಮೂಲಕ ರಾಮ ಜನ್ಮ ಭೂಮಿ ಮತ್ತೊಮ್ಮೆ ತನ್ನ ಗತ ವೈಭವ ಮರುಕಳಿಸಲು ಸಹಕಾರಿಯಾಗುವ ಎಲ್ಲಾ ಚರ್ಚೆಗಳು ಇರಲಿವೆ ಎನ್ನಲಾಗುತ್ತಿದೆ.
ಮಾಸ್ ಲುಕ್ ನಲ್ಲಿ ಧರ್ಮ ಕೀರ್ತಿರಾಜ್
ನಟ ಧರ್ಮ ಕೀರ್ತಿರಾಜ್ ಹಾಗೂ ಉಗ್ರಂ ಮಂಜು ಬಿಗ್ ಬಾಸ್ ಮನೆಯಲ್ಲಿ ಇದ್ದಾಗಲೇ ಅವರ ಸಿನಿಮಾ 'ಟೆನಂಟ್' ಬಿಡುಗಡೆಯಾಗಿರುವುದು ಅಭಿಮಾನಿಗಳಿಗೆ ಖುಷಿಯ ವಿಚಾರವಾಗಿದೆ. ಈ ಚಿತ್ರದಲ್ಲಿ ಧರ್ಮ...