A sportsman, A leader, A captain and Inspiration.. KING KOHLI
71 ಶತಕಗಳು.. 25 ಸಾವಿರಕ್ಕೂ ಹೆಚ್ಚು ರನ್ ಗಳು.. 128 ಅರ್ಧಶತಕಗಳು.. ಒಟ್ಟು 480 ಮ್ಯಾಚ್ ಗಳು.. ಒಬ್ಬ ಆಟಗಾರ..
ದೆಹಲಿಯಲ್ಲಿ ಸರಿಯಾಗಿ 34 ವರ್ಷಗಳಿಂದೆ ಹುಟ್ಟಿದ. ತೂಫಾನ್ ನಂತೆ ಓಡುವ ಪೋರ. ಆತನ ಗೆಲುವು ನಿಮಗೆ ಕಾಣಿಸುತ್ತೆ.
ಆತನ ಕಣಕ್ಕಿಳಿಯುತ್ತಿದ್ದಂತೆ ಪಂಚಭೂತಗಳು ಆಕ್ಟೀವ್ ಆಗುತ್ವೆ. ಮೈದಾನ ಮೈ ಮುರಿಯುತ್ತದೆ.
ಆತ ಬೌಂಡರಿ ಬಾರಿಸುತ್ತಿದ್ದಂತೆ ಸ್ಟೇಡಿಯಂ ಹೌರಾ ಎನ್ನುತ್ತೆ.
ಯಾರನ್ನ ನೋಡಿದ್ರೆ ಬೌಲರ್ ಗಳು ಭಯಭೀತರಾಗುತ್ತಾರೋ, ಯಾರು ಆಡುತ್ತಿದ್ದರೇ ಕಾಮೆಂಟ್ ಟೇಟರ್ ಹೊಸ ಹೊಸ ಪದಗಳನ್ನು ಹುಡುಕುತ್ತಾರೋ, ಯಾರ ಕೈಯಲ್ಲಿ ಬ್ಯಾಟ್ ಖಡ್ಗನಂತೆ ನರ್ತಿಸುತ್ತದೋ, ಯಾರು ಚೇಸ್ ಮಾಡಿದ್ರೆ ಕಷ್ಟ ಎಂದುಕೊಂಡಿದ್ದ ಪಂದ್ಯ ಗೆಲ್ಲುತ್ತದೋ, ಯಾರು ನೋಡಿದ್ರೆ ಭಯ ಸಾಯುತ್ತೋ, ಯಾರು ಆಡಿದ್ರೆ ಧೈರ್ಯ ಬರುತ್ತೋ, ಯಾರು 140 ಕೋಟಿ ಭಾರತೀಯರ ಮೊಗದಲ್ಲಿ ಮಂದಹಾಸ ಮೂಡಿಸುತ್ತಾನೋ, ಯಾರು ಭಾರತದ ತಿರಂಗಾ ಹೆಮ್ಮೆ ಪಡುವಂತೆ ಮಾಡುತ್ತಾನೋ, ಆತನೇ ದ ಕಿಂಗ್ ವಿರಾಟ್ ಕೊಹ್ಲಿ..!!

ಕೆಲವು ವರ್ಷಗಳ ಕಾಲ ಟೆಸ್ಟ್, ಏಕದಿನ, ಟಿ 20 ಕ್ರಿಕೆಟ್ ಅನ್ನು ಒಬ್ಬನೇ ಆಳಿದವನು. ಯಾರಾದ್ರೂ ಔಟ್ ಆದ್ರೆ ನೆಕ್ಸ್ಟ್ ಬ್ಯಾಟರ್ ಅಂತಾ ಕಾಯುತ್ತೇವೆ, ಆದ್ರೆ ವಿರಾಟ್ ಔಟ್ ಆದ್ರೆ ಕೂಡಲೇ ಟಿವಿಗಳು ಆಫ್ ಆಗುತ್ತವೆ, ಸೀಮಿತ ಓವರ್ ಗಳಲ್ಲಿ ನಮ್ಮ ಟೀಂ ಇಂಡಿಯಾದ ಫಸ್ಟ್ ವಿಕೆಟ್ ಬಿದ್ದರೇ ಎದುರಾಳಿ ತಂಡದ ಅಭಿಮಾನಿಗಳು ಕಿರುಚಬೇಕು, ಸಂಭ್ರಮಿಸಬೇಕು. ಆದ್ರೆ ಅವರ ಕೂಗಾಟಕ್ಕಿಂತ ವಿರಾಟ್ ಬರುತ್ತಿದ್ದಾನೆ ಅಂತಾ ನಮ್ಮವರು ಮಾಡುವ ಘರ್ಜನೆ, ಆನಂದ ಪಡುವ ಎದುರಾಳಿಗಳಿಗೂ ಭಯ ಹುಟ್ಟಿಸುತ್ತೆ.
ಕೋಟ್ಯಾಂತರ ಅಭಿಮಾನಿಗಳಿಗೆ ಕೊಹ್ಲಿ ಒಂದು ವರ. ಆದ್ರೆ ಎದುರಾಗಳಿಗೆ ಕೊಹ್ಲಿ ಶಾಪ. ಸ್ವಂತ ದೇಶದಲ್ಲಿ ಯಾರಿಗಾದ್ರೂ ಸ್ಟಾಂಡ್ ಗಳಿರುತ್ತವೆ, ವಿರಾಟ್ ಹೆಸರಲ್ಲಿ ವಿದೇಶಗಳಲ್ಲಿ ಬೀದಿಗಳ ಹೆಸರು ಕೂಡ ಇದೆ. A sportsman, A leader, A captain and Inspiration.. KING KOHLI








