Andra pradesha: ಹಾಸ್ಟೆಲ್ ನಲ್ಲಿ ವಿದ್ಯಾರ್ಥಿ ಮೇಲೆ ಹಲ್ಲೆ – ವಿಡಿಯೋ ವೈರಲ್
ಹಾಸ್ಟೆಲ್ ನಲ್ಲಿ ವಿದ್ಯಾರ್ಥಿ ಮೇಲೆ ಸಹಪಾಠಿಗಳು ಕೈಗೆ ಸಿಕ್ಕ ವಸ್ತುಗಳಿಂದ ಹಲ್ಲೆ ಮಾಡಿ ರ್ಯಾಗಿಂಗ್ ಮಾಡಿರುವ ಘಟನೆ ಆಂಧ್ರ ಪ್ರದೇಶದ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದಿದೆ.
ಆಂಧ್ರ ಪ್ರದೇಶದ ಭೀಮಾವರಂ ನ SRKR ಇಂಜಿನಿಯರಿಂಗ್ ಕಾಲೇಜಿನಲ್ಲಿ ಈ ಘಟನೆ ವರದಿಯಾಗಿದೆ. ಹಲ್ಲೆಗೊಗಾದ ವಿದ್ಯಾರ್ಥಿಯನ್ನ ಅಂಕಿತ್ ಎಂದು ಗುರುತಿಸಲಾಗಿದೆ. ಮೈಮೇಲೆ ಹೊಡೆದಿರುವ ಗಾಯಗಳಾಗಿದ್ದು ಆಸ್ಪತ್ರೆಗೆ ಸೇರಿಸಲಾಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಆಂಧ್ರ ಪೊಲೀಸರು ಸಹಪಾಠಿಗಳನ್ನ ಬಂಧಿಸಿದ್ದಾರೆ.
Four engineering students studying in #SRKR #Engineering College #Bhimavaram #WestGodavari #AP have been arrested for assaulting fellow student inside hostel room with sticks, PVC pipes & branding him on chest with hot iron box even as he is pleading to be spared #AndhraPradesh pic.twitter.com/QeMubMkt7i
— rejected guy (@Brother31952713) November 5, 2022
ವಿದ್ಯಾರ್ಥಿಗಳೆಲ್ಲರೂ ಕಂಪ್ಯೂಟರ ಸೈನ್ಸ್ ವಿದ್ಯಾರ್ಥಿಗಳಾಗಿದ್ದಾರೆ. ಹಲ್ಲೆಕೋರರು ವಿದ್ಯಾರ್ಥಿಗೆ ದೊಣ್ಣೆಯಿಂದ ಹೊಡೆಯುತ್ತಿದ್ದು, ಕ್ಷಮೆ ಯಾಚಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ನಾಲ್ವರು ವಿದ್ಯಾರ್ಥಿಗಳು ಇಸ್ತ್ರಿ ಪೆಟ್ಟಿಗೆ ಬಳಸಿ ಹಲ್ಲೆ ಮಾಡಿದ್ದು. ದೊಣ್ಣೆ ಮತ್ತು ಪಿವಿಸಿ ಪೈಪ್ ಗಳಿದ್ದ ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ದಾಖಲಿಸಲಾಗಿದೆ.
Student Beaten, Burnt With Iron Box By College Mates In Andhra pradesha








