PAK VS BAN: ಮಿರಾಕಲ್ ರೀತಿಯಲ್ಲಿ ಸೆಮಿಪೈನಲ್ ತಲುಪಿದ ಪಾಕಿಸ್ತಾನ…
2009 ರ ಚಾಂಪಿಯನ್ ಪಾಕಿಸ್ತಾನ ತಂಡ ಟಿ20 ವಿಶ್ವಕಪ್ನಲ್ಲಿ ಸೆಮಿಫೈನಲ್ ಪ್ರವೇಶಿಸಿದೆ. ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 5 ವಿಕೆಟ್ಗಳಿಂದ ಮಣಿಸಿದೆ.
ಪಾಕಿಸ್ತಾನ ಇದೀಗ ನ್ಯೂಜಿಲೆಂಡ್ ಅಥವಾ ಇಂಗ್ಲೆಂಡ್ ಅನ್ನ ಎದುರಿಸಲಿದೆ. ಈಗ ನಡೆಯಲಿರುವ ಭಾರತ-ಜಿಂಬಾಬ್ವೆ ಪಂದ್ಯದಿಂದ ಯಾರಯ ಯಾರನ್ನ ಎದುರಿಸಲಿದ್ದಾರೆ ಎಂಬುದು ನಿರ್ಧಾರವಾಗಲಿದೆ.
ಅಡಿಲೇಡ್ ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 127 ರನ್ ಗಳಿಸಿತು. ತಂಡದ ಆರಂಭಿಕ ಆಟಗಾರ ನಜ್ಮುಲ್ ಹೊಸೈನ್ ಶಾಂಟೊ (54) ಅರ್ಧಶತಕ ಗಳಿಸಿದರು. ಅದರ ಹೊರತಾಗಿಯೂ, ತಂಡವ ಕಡಿಮೆ ಮೊತ್ತಕ್ಕೆ ಕುಸಿದು ಬಿದ್ದಿತು.
ಅಫೀಫ್ ಹೊಸೈನ್ (24) ಮತ್ತು ಸೌಮ್ಯ ಸರ್ಕಾರ್ (20) ಮಾತ್ರ ಒಂದಿಷ್ಟು ರನ್ ಪೇರಿಸಿದರು. ಉಳಿದ ಬ್ಯಾಟ್ಸ್ಮನ್ಗಳು 10 ರ ಗಡಿ ದಾಟಲು ಸಾಧ್ಯವಾಗಲಿಲ್ಲ.
ಇದಕ್ಕೆ ಉತ್ತರವಾಗಿ ಪಾಕಿಸ್ಥಾನ 19.1 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗುರಿ ತಲುಪಿದೆ.
ರಿಜ್ವಾನ್ ಮತ್ತು ಬಾಬರ್ ಮೊದಲ ವಿಕೆಟ್ಗೆ 57 ರನ್ ಜೊತೆಯಾಟ ನಡೆಸಿ ತಂಡವನ್ನು ಗೆಲುವಿನ ಸಮೀಪಕ್ಕೆ ಕೊಂಡೊಯ್ದರು. ಪಾಕಿಸ್ತಾನ ಇನ್ನೂ 11 ಎಸೆತಗಳು ಬಾಕಿ ಇರುವಂತೆಯೇ 5 ವಿಕೆಟ್ಗೆ 130 ರನ್ ಗಳಿಸುವ ಮೂಲಕ ಪಂದ್ಯ ಗೆದ್ದುಕೊಂಡಿತು.
PAK VS BAN: Miracle Pakistan in the semi-finals








