Rakhi Sawanth : ಡುಮ್ಮಿ ಎಂದ ಶರ್ಲಿನ್ ವಿರುದ್ಧ ಕೇಸ್ ದಾಖಲಿಸಿದ ರಾಖಿ ಸಾವಂತ್…
ಬಾಲಿವುಡ್ ನ ಡ್ರಾಮಾ ಕ್ವೀನ್ ರಾಕಿ ಸಾವಂತ್ ಯಾವುದಾದರೋಂದು ಕಿರಿಕ್ ಕಾರಣಕ್ಕೆ ಸುದ್ದಿಯಲ್ಲಿ ಇದ್ದೇ ಇರುತ್ತಾರೆ. ಇದೀಗ ಶೆರ್ಲಿನ್ ಚೋಪ್ರಾ ಹೇಳಿಕೆಯಿಂದಾಗಿ ಮತ್ತೆ ಸುದ್ದಿಯಲ್ಲಿದ್ದಾರೆ.
ಶರ್ಲಿನ್ ಚೋಪ್ರಾ ರಾಕಿ ಸಾವಂತ್ ವಿರುದ್ಧ ನೀಡಿರುವ ಹೇಳಿಕೆಯಿಂದ.. ರಾಖಿ ಸಾವಂತ್ ಮತ್ತು ಶೆರ್ಲಿನ್ ಚೋಪ್ರಾ ನಡುವೆ ಕೆಲವು ದಿನಗಳಿಂದ ವಾಕ್ಸಮರ ನಡೆಯುತ್ತಿದೆ..
ಇದೀಗ ಇವರಿಬ್ಬರ ನಡುವೆ ಗಲಾಟೆ ಮತ್ತೊಂದು ಹಂತ ತಲುಪಿದ್ದು , ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕಾಗಿ ಶರ್ಲಿನ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ರಾಕಿ ದೂರು ದಾಖಲಿಸಿದ್ದಾರೆ.
ಈ ಹಿಂದೆ #MeToo ಆರೋಪಿ ಚಿತ್ರನಿರ್ಮಾಪಕ ಸಾಜಿದ್ ಖಾನ್ ವಿರುದ್ಧ ಪೊಲೀಸ್ ಠಾಣೆಗೆ ಶರ್ಲಿನ್ ದೂರು ದಾಖಲಿಸಿದ್ದರು.. ಸಾಜಿದ್ ಬಿಗ್ ಬಾಸ್ ಹಿಂದಿ ಸೀಸನ್ 16 ರಲ್ಲಿ ಸ್ಪರ್ಧಿಯಾದಾಗ ಸಿಕ್ಕಪಟ್ಟೆ ವಿರೋಧ ವ್ಯಕ್ತವಾಗಿತ್ತಾದ್ರೆ , ರಾಕಿ ಸಾಜಿದ್ ಪರ ಮಾತನಾಡಿದ್ರು.. ಹೀಗಾಗಿ ಶರ್ಲಿನ್ ರಾಕಿ ವಿರುದ್ಧ ಕಿಡಿಕಾರಿದ್ದರು..
ಸಾಜಿದ್ ಮತ್ತು ರಾಜ್ ಕುಂದ್ರಾ ಬೆಂಬಲಕ್ಕೆ ಬಂದಿದ್ದಕ್ಕಾಗಿ ರಾಖಿ ವಿರುದ್ಧ ಶರ್ಲಿನ್ ಕಿಡಿಕಾರಿದ್ದು , ಇಬ್ಬರ ನಡುವೆ ವಾಕ್ಸಮರ ಜಾರಿಯಲ್ಲಿದೆ..
ಇತ್ತೀಚೆಗೆ ರಾಖಿ ಸಾವಂತ್ ಅವರನ್ನು ಗೇಲಿ ಮಾಡಿದ್ದ ಶರ್ಲಿನ್, ರಾಕಿ ಡುಮ್ಮಿ , ಮೈ ಬೆಳೆಸಿಕೊಂಡಿದ್ದಾರೆ. ಹೀಗಾಗಿ ಜಿಮ್ ಹೊರಗೆ ಸುತ್ತುತ್ತಾರೆ.. ಕಸರತ್ತು ಮಾಡಿ ದೇಹ ಕರಗಿಸಿಕೊಳ್ಳಲು ಶ್ರಮ ವ್ಯಯಿಸಲು ಆಗುವುದಿಲ್ಲ ಎಂದು ಟೀಕೆ ಮಾಡಿದ್ದರು..
ಶನಿವಾರ, ಮುಂಬೈನ ಓಶಿವಾರಾ ಪೊಲೀಸ್ ಠಾಣೆಯಲ್ಲಿ ತನ್ನ ವಕೀಲರೊಂದಿಗೆ ಶೆರ್ಲಿನ್ ವಿರುದ್ಧ ರಾಖಿ ಸಾವಂತ್ ದೂರು ದಾಖಲಿಸಿದ್ದಾರೆ.
Rakhi Sawant: Rakhi Sawant filed a case against Sherlin chopra








