Pregnant suicide-ಕುಡಿತದ ಚಟಕ್ಕೆ ದಾಸನಾಗಿದ್ದ ಪತಿಯ ಕಿರುಕುಳ ಸಹಿಸದೆ ತುಂಬು ಗರ್ಭಿಣಿಯೋಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಜಧಾನಿ ಬೆಂಗಳೂರಿನ ನೆಲಮಂಗಲದಲ್ಲಿ ನಡೆದಿದೆ.
ಆತ್ಮಹತ್ಯೆಗೆ ಶರಣಾದ ಯುವತಿಯನ್ನು ಸೌಂದರ್ಯ 20 ಎಂದು ತಿಳಿದು ಬಂದಿದು ಇವಳು ಒಂದು ವರ್ಷದ ಹಿಂದೆ ಸಂತೋಷ್ ಎಂಬ ಯುವಕನನ್ನು ಪ್ರೀತಿಸಿ ಪೋಷಕರ ವಿರೋಧದ ವಿಟ್ಟುಕೊಂಡು ಮದುವೆಯಾಗಿದ್ದಳು.
ಸಂತೋಷ್ ಮತ್ತು ಸೌಂದರ್ಯ ಒಂದೇ ಕಂಪನಿಯಲ್ಲಿ ಅನ್ಯೋನ್ಯದಿಂದ ಕೆಲಸ ಮಾಡುತ್ತಾ, ನೆಲಮಂಗಲ ಸಮೀಪದ ಶಿವನಪುರದಲ್ಲಿ ವಾಸವಾಗಿದ್ದರು.
ಇವರ ಪ್ರೇಮದ ಸಂಕೇತವಾಗಿ ಸೌಂದರ್ಯ 8 ತಿಂಗಳ ತುಂಬು ಗರ್ಭಿಣಿಯಾಗಿದ್ದಳು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಳು .
ಆದರೆ ಸಂತೋಷ್ ಇತ್ತೀಚೆಗೆ ಕೆಲಸ ಬಿಟ್ಟು ಮನೆಯಲ್ಲೇ ಇದ್ದ. ಕೆಲಸ ಇಲ್ಲದ ಹಿನ್ನೆಲೆಯಲ್ಲಿ ಸಂತೋಷ್ ಕುಡಿತದ ಚಟಕ್ಕೆ ಒಳಗಾಗಿದ್ದ. ಅಷ್ಟೇ ಅಲ್ಲದೇ ಪ್ರತಿನಿತ್ಯ ಕುಡಿದು ಬಂದು ಸೌಂದರ್ಯ ಬಳಿ ಹಣಕ್ಕಾಗಿ ಪೀಡಿಸುತ್ತಿದ್ದ.
ಇದರಿಂದಾಗಿ ಸಂತೋಷ್‍ನ ಕಿರುಕುಳ ತಾಳಲಾರದೇ ಮನನೊಂದು ಸೌಂದರ್ಯ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂಬ ಆರೋಪ ಕೇಳಿ ಬಂದಿದೆ.
ಘಟನೆಗೆ ಸಂಬಂಧಿಸಿ ಮಾದನಾಯಕನಹಳ್ಳಿ ಪೊಲೀಸರು ಸೌಂದರ್ಯನ ಕುಟುಂಬಸ್ಥರು ನೀಡಿರುವ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದು, ಸಂತೋಷ್‍ನನ್ನು ಬಂಧಿಸಿ, ಕ್ರಮ ಕೈಗೊಂಡಿದ್ದಾರೆ








