Bear Attack: ಮೂವರ ಮೇಲೆ ಮಾರಣಾಂತಿಕ ದಾಳಿ ಮಾಡಿದ ಕರಡಿ (Video)
ಕರಡಿಯೊಂದು ಮೂವರ ಮೇಲೆ ಮಾರಣಾಂತಿಕವಾಗಿ ದಾಳಿ ಮಾಡಿರುವ ಘಟನೆ ತಮಿಳುನಾಡಿನ ತೆಂಕಶಿ ಜಿಲ್ಲೆಯಲ್ಲಿ ನಡೆದಿದೆ.
ಕರುತಿಲಿಂಗಪುರಂ ಗ್ರಾಮದ ವೈ ಗುಂಡಮಣಿ ಎಂಬುವರು ಮಸಾಲಾ ಪೊಟ್ಟಣಗಳನ್ನು ಹೊತ್ತು ಬೈಕ್‌ನಲ್ಲಿ ಶಿವಶೈಲಂನಿಂದ ಪೇಠಾಣಪಿಳ್ಳೈ ಕಡೆಗೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ವೈಗುಂಡಮಣಿ ದಟ್ಟವಾದ ಅರಣ್ಯ ಪ್ರದೇಶವನ್ನು ದಾಟುತ್ತಿದ್ದಾಗ ಕರಡಿ ಇದ್ದಕ್ಕಿದ್ದಂತೆ ಹತ್ತಿರದ ಪೊದೆಗಳಿಂದ ಹಾರಿ ಬಂದು ಮನಸೋ ಇಚ್ಚೆ ದಾಳಿ ಮಾಡಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ನೊಡುವವರ ಎದೆ ಝಲ್ಲೆನಿಸುವಂತಿದೆ.
Three injured in a bear attack near Tirunelveli in Tamilnadu. Bear has been captured by the team of veterinary doctors and forest teams.
*Disturbing Visuals* pic.twitter.com/gxQo4OaT5w
— Pinky Rajpurohit (ABP News) 🇮🇳 (@Madrassan_Pinky) November 7, 2022
ವೈ ಗುಂಡಮಣಿಯವರನ್ನ ನೆಲಕ್ಕೆ ಕೆಡವಿದ ಕರಡಿ ಮಾರಣಾಂತಿಕವಾಗಿ ಕಚ್ಚಿದೆ. ದಾರಿಹೋಕರು ಹಾಗೂ ಸಮೀಪದ ಗ್ರಾಮದ ಜನರು ಅಲ್ಲಿಗೆ ಬಂದು ಜೋರಾಗಿ ಕೂಗಿ ಕರಡಿಯನ್ನು ಓಡಿಸಲು ಯತ್ನಿಸಿದ್ದಾರೆ. ಆದರೂ ಬಿಡದೆ ವೈಗುಂಡಮಣಿಯ ಮೇಲೆ ದಾಳಿ ಮಾಡುತ್ತಲೇ ಇದೆ.
ಬಳಿಕ ಕರಡಿಯ ಮೇಲೆ ಕಲ್ಲು ತೂರಾಟ ನಡೆಸುತ್ತಿದ್ದಂತೆ ಮಣಿಯನ್ನ ಬಿಟ್ಟು ನಾಗೇಂದ್ರನ್ ಮತ್ತು ಶೈಲೇಂದ್ರ ಮೇಲೆ ಹಲ್ಲೆ ನಡೆಸಿ ಓಡಿ ಹೋಗಿದೆ. ಮಾಹಿತಿ ಪಡೆದ ಅರಣ್ಯಾಧಿಕಾರಿಗಳು ಸಂತ್ರಸ್ತರನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಬಳಿಕ ಕರಡಿಯನ್ನು ಸೆರೆ ಹಿಡಿಯಲಾಯಿತು. ಇದೇ ವೇಳೆ ಗಾಯಗೊಂಡ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.
Bear Attack: Three people were fatally attacked by a bear (Video)







