Bhuvneshwar Kumar | ಚರಿತ್ರೆ ಸೃಷ್ಟಿಸಿದ ಭುವನೇಶ್ವರ್ ಕುಮಾರ್
ಟಿ 20 ವಿಶ್ವಕಪ್ ಭಾಗವಾಗಿ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾದ ಸ್ವಿಂಗ್ ಸುಲ್ತಾನ್ ಭುನವೇಶ್ವರ್ ಕುಮಾರ್ ಚರಿತ್ರೆ ಸೃಷ್ಟಿಸಿದ್ದಾರೆ.
ಅಂತರಾಷ್ಟ್ರೀಯ ಟಿ 20 ಕ್ರಿಕೆಟ್ ನಲ್ಲಿ ಅತ್ಯಧಿಕ ಮೇಡಿನ್ ಓವರ್ ಗಳನ್ನು ಸಾಧಿಸಿದ ಭಾರತೀಯ ಬೌಲರ್ ಎಂದು ದಾಖಲೆ ನಿರ್ಮಿಸಿದ್ದಾರೆ.
ಜಿಂಬಾಬ್ವೆ ಇನ್ನಿಂಗ್ಸ್ ನ ಮೊದಲ ಓವರ್ ನಲ್ಲಿ ಮೊದಲ ಎಸೆತಕ್ಕೆ ವಿಕೆಟ್ ಪಡೆದ ಭುಮಿ, ಆ ಓವರ್ ನಲ್ಲಿ ಒಂದೇ ಒಂದು ರನ್ ಕೂಡದೇ ಮೇಡಿನ್ ತೆಗೆದುಕೊಂಡರು.
ಈ ಮ್ಯಾಚ್ ಗೂ ಮೊದಲು ಅಂತರಾಷ್ಟ್ರೀಯ ಟಿ 20ಯಲ್ಲಿ ಅತ್ಯಧಿಕ ಮೇಡಿನ್ ಓವರ್ ದಾಖಲೆ ಜಸ್ ಪ್ರಿತ್ ಬುಮ್ರಾ ಹೆಸರಿನಲ್ಲಿತ್ತು.
ಒಟ್ಟಾರೆ ಚುಟುಕು ಕ್ರಿಕೆಟ್ ನಲ್ಲಿ ಅಧಿಕ ಮೇಡಿನ್ ಓವರ್ ದಾಖಲೆ ವಿಂಡೀಸ್ ಸ್ಪಿನ್ನರ್ ಸುನಿಲ್ ನರೈನ್ ಹೆಸರಿನಲ್ಲಿತ್ತು.

ನರೈಸ್ ಟಿ 20 ಕ್ರಿಕೆಟ್ ನಲ್ಲಿ ಒಟ್ಟಾರೆ 27 ಮೇಡಿನ್ ಓವರ್ ಎಸೆದಿದ್ದಾರೆ. ಅವರ ನಂತರದ ಸ್ಥಾನದಲ್ಲಿ ಬಾಂಗ್ಲಾದೇಶದ ಕ್ಯಾಪ್ಟನ್ ಶಖಿಬ್ ಅಲ್ ಹಸನ್ ಇದ್ದಾರೆ.
ಶಕೀಬ್ ಖಾತೆಯಲ್ಲಿ 23 ಮೇಡಿನ್ ಓವರ್ ಗಳಿವೆ. ಇವರ ನಂತರ ವಿಂಡೀಸ್ ಲೆಗ್ ಸ್ಪಿನ್ನರ್ ಶ್ಯಾಮುಲ್ ಬದ್ರಿ 21, ಭುನವೇಶ್ವರ್ ಕುಮಾರ್ 21 ಮೇಡಿನ್ ಓವರ್ ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.
ಈ ಪಟ್ಟಿಯಲ್ಲಿ ಟೀಂ ಇಂಡಿಯಾದ ವೇಗಿ ಜಸ್ ಪ್ರಿತ್ ಬುಮ್ರಾ ಆರನೇ ಸ್ಥಾನದಲ್ಲಿದ್ದಾರೆ.
ಜಿಂಬಾಬ್ವೆ ವಿರುದ್ಧ ಗೆಲುವು ಸಾಧಿಸಿದ ಟೀಂ ಇಂಡಿಯಾ ನವೆಂಬರ್ 10 ರಂದು ಇಂಗ್ಲೆಂಡ್ ವಿರುದ್ಧ ಸೆಮೀಸ್ ನಲ್ಲಿ ಮುಖಾಮುಖಿಯಾಗಲಿದೆ.








