Reels-ಸದಾ ಕಾಲ ಸೋಷಿಯಲ್ ಮೀಡಿಯಾ ರೀಲ್ಸ್ ಮಾಡುತ್ತಿರು ಹೆಂಡತಿ ನೋಡಿ ಬೇಸತ್ತ ಗಂಡ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಬೇಳಕಿಗೆ ಬಂದಿದೆ.
ಈ ಘಟನೆ ತಮಿಳುನಾಡಿನಲ್ಲಿ ನಡೆದದ್ದು 38 ವರ್ಷದ ವ್ಯಕ್ತಿಯೊಬ್ಬ ಭಾನುವಾರ ರಾತ್ರಿ ತನ್ನ ಪತ್ನಿಯನ್ನು ಆಕೆಯ ಶಾಲಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ .
ಸಾಮಾಜಿಕ ಜಾಲತಣದಲ್ಲಿ ಟಿಕ್‌ಟಾಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ರೀಲ್ಸ್ಮಾಡಿ ಪೋಸ್ಟ್ ಮಾಡುವ ಅಭ್ಯಾಸ ಹೊಂದಿದ್ದ ಚಿತ್ರಾ ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದಳು ಈ ವಿಚಾರವಾಗಿ ಅಮೃತಲಿಂಗಂನ ಪತ್ನಿ ಚಿತ್ರಾ ಜೊತೆಗೆ ಹಲವಾರು ಬಾರಿ ಜಗಳವಾಡಿದ್ದ. ಇಡೀ ದಿನ ಮೊಬೈಲ್ನಲ್ಲಿ ಮುಳುಗಿರುವುದಕ್ಕೆ ಕೋಪಗೊಂಡಿದ್ದ.
ತಮಿಳುನಾಡಿನ ತಿರುಪ್ಪೂರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಅಮೃತಲಿಂಗಂ ಚಿತ್ರಾಳನ್ನು ಮದುವೆಯಾಗಿ ತಿರುಪುರದ ಸೆಲ್ಲಂ ನಗರದಲ್ಲಿ ವಾಸಿಸುತ್ತಿದ್ದ. ಅಮೃತಲಿಂಗಂ ತೆನ್ನಂ ಪಾಳಯಂ ತರಕಾರಿ ಮಾರುಕಟ್ಟೆಯಲ್ಲಿ ದಿನಗೂಲಿ ಕೆಲಸ ಮಾಡುತ್ತಿದ್ದ.
ಎರಡು ತಿಂಗಳ ಹಿಂದೆ ಚೆನ್ನೈಗೆ ತೆರಳಿದ್ದ ಆಕೆಯ ಇನ್ಸ್ಟಾಗ್ರಾಂ ಖಾತೆಯಲ್ಲಿ 33 ಸಾವಿರ ಫಾಲೋವರ್ಗಳನ್ನು ಹೊಂದಿದ್ದಳು. ಇನ್ಸ್ಟಾಗ್ರಾಂನಲ್ಲಿ ಚಿತ್ರಾಳ ಫಾಲೋವರ್ಗಳ ಸಂಖ್ಯೆ ಹೆಚ್ಚಾದ ನಂತರ ಆಕೆ ಇನ್ನಷ್ಟು ಅದಕ್ಕೆ ಅಡಿಕ್ಟ್ ಆಗಿದ್ದಳು. ತಾನು ದೊಡ್ಡ ನಟಿಯಾಗಬೇಕು ಎಂದು ಬಯಸಿದ ಆಕೆ ಹೆಚ್ಚೆಚ್ಚು ರೀಲ್ಸ್ಗಳನ್ನು ಮಾಡತೊಡಗಿದಳು.
ಗಂಡನಿಂದ ದೂರ ಹೋಗಿ ಚೆನ್ನೈನಲ್ಲಿದ್ದ ಚಿತ್ರಾ ಕಳೆದ ವಾರ ತನ್ನ ಮಗಳ ಮದುವೆಗೆಂದು ಊರಿಗೆ ವಾಪಾಸ್ ಬಂದಿದ್ದಳು. ಮದುವೆ ಮುಗಿಸಿ ಅವಳು ಚೆನ್ನೈಗೆ ಹೊರಡಲು ತಯಾರಾಗುತ್ತಿದ್ದಳು, ಆದರೆ ಅಮೃತಲಿಂಗಂಗೆ ಅವಳು ಚೆನ್ನೈಗೆ ಹೋಗುವುದು ಇಷ್ಟವಿರಲಿಲ್ಲ.
ಚಿತ್ರಾ ರೀಲ್‌ಗಳನ್ನು ಅಪ್‌ಲೋಡ್ ಮಾಡುವ ಬಗ್ಗೆ ಮತ್ತು ಚಲನಚಿತ್ರಗಳಲ್ಲಿ ನಟಿಸಲು ಬಯಸಿದ್ದಕ್ಕೆ ಭಾನುವಾರ ರಾತ್ರಿ ಗಂಡ-ಹೆಂಡತಿ ನಡುವೆ ಜಗಳ ನಡೆದಿದೆ. ಈ ಜಗಳ ವಿಕೋಪಕ್ಕೆ ತಿರುಗಿ ಅಮೃತಲಿಂಗಂ ಚಿತ್ರಾಳ ಕುತ್ತಿಗೆಯನ್ನು ಶಾಲಿನಿಂದ ಕಟ್ಟಿ ಉಸಿರುಗಟ್ಟಿಸಿ ಕೊಂದಿದ್ದಾನೆ.
ಆಕೆ ಮೂರ್ಛೆ ಹೋದಾಗ ಅಮೃತಲಿಂಗಂ ಗಾಬರಿಗೊಂಡು ಮನೆಯಿಂದ ಹೊರಟು ಹೋಗಿದ್ದಾನೆ. ಎದುರು ಸಿಕ್ಕ ಮಗಳ ಬಳಿ ತಾನು ಚಿತ್ರಾಗೆ ಹೊಡೆದಿರುವುದಾಗಿ ಹೇಳಿ ಅಲ್ಲಿಂದ ಹೋಗಿದ್ದಾನೆ. ಅಪ್ಪ-ಅಮ್ಮನ ಜಗಳದ ಬಗ್ಗೆ ತಿಳಿದಿದ್ದ ಮಗಳು ಅದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ.
ಸ್ವಲ್ಪ ಹೊತ್ತಾದ ಬಳಿಕ ಅಮ್ಮನನ್ನು ಸಮಾಧಾನ ಮಾಡಲೆಂದು ರೂಮಿಗೆ ಹೋದ ಆಕೆ ಚಿತ್ರಾಳನ್ನು ಎಬ್ಬಿಸಲು ಪ್ರಯತ್ನಿಸಿದಾಗ ಆಕೆ ಸಾವನ್ನಪ್ಪಿರುವುದು ಬಯಲಾಗಿದೆ. ನಂತರ ಪೊಲೀಸರಿಗೆ ವಿಷಯ ತಿಳಿಸಿದ ಆಕೆ ತನ್ನ ತಂದೆಯ ವಿರುದ್ಧ ದೂರು ನೀಡಿದ್ದಾಳೆ. ಪೆರುಮಾನಲ್ಲೂರಿನಲ್ಲಿ ಅಮೃತಲಿಂಗಂನನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.








