ಹೆಣ್ಣು ಮಕ್ಕಳು ಸ್ವಾಮೀಜಿಗಳ ಬಳಿ ಹೋಗದಂತಹ ಸ್ಥಿತಿ ನಿರ್ಮಣವಾಗಿದೆ – ಶಾಮನೂರು ಶಿವಶಂಕರಪ್ಪ…
ಚಿತ್ರದುರ್ಗದ ಮುರುಘಾಶ್ರೀ ವಿರುದ್ಧ ಚಾರ್ಜ ಶೀಟ್ ಸಲ್ಲಿಕೆಯಾಗುತ್ತಿದ್ದಂತೆ ಸ್ವಾಮೀಜಿಯ ವಿರುದ್ಧ ಕಾಂಗ್ರೆಸ್ ನ ಹಿರಿಯ ನಾಯಕ ದಾವಣಗೆರೆ ಶಾಸಕ ಶಾಮನೂರು ಶಿವಶಂಕರಪ್ಪ ಟೀಕಿಸಲು ಶುರು ಮಾಡಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ತರಳಬಾಳು ಮಠದಿಂದ ಆಯೋಜಿಸಿದ್ದ ರಾಷ್ಟ್ರೀಯ ನಾಟಕೋತ್ಸವದಲ್ಲಿ ಭಾಷಣದ ವೇಳೆ ಜನರನ್ನುದ್ದೇಶಿಸಿ ಮಾತನಾಡಿದ ಅವರು “ಹೆಣ್ಣುಮಕ್ಕಳು ಸ್ವಾಮಿಗಳ ಬಳಿ ಹೋಗದಂತ ಸ್ಥಿತಿ ನಿರ್ಮಾಣವಾಗಿದೆ.
ಮಾಧ್ಯಮಗಳಲ್ಲಿ ಬರ್ತಿರುವ ಮಾಹಿತಿ ನೋಡಿ ನಾಚಿಕೆ ಆಗ್ತಿದೆ, ನಮ್ಮ ಹೆಣ್ಣು ಮಕ್ಕಳು ಕೂಡಾ ಎಚ್ಚರಿಕೆ ವಹಿಸಬೇಕು. ಪ್ರಕರಣದ ಬಗ್ಗೆ ವೀರಶೈವ ಮಹಾಸಭಾ ಸೂಕ್ತ ತೀರ್ಮಾನ ಮಾಡುತ್ತೆ ಎಂದಿದ್ದಾರೆ.
ಕಾರ್ಯಕ್ರಮದಲ್ಲಿ ಹಾಜರಿದ್ದ ಅನೇಕರು ಪರೋಕ್ಷವಾಗಿ ಮುರುಘಾಶ್ರೀ ವಿರುದ್ಧ ತಿರುಗಿ ಬಿದ್ದಿದ್ದಾರೆ. ಅಲ್ಲದೇ ಚಾರ್ಜ್ ಶೀಟ್ ನಲ್ಲಿನ ಅಂಶಗಳು ಬಯಲಾದ ಬಳಿಕ ಮುಖಂಡರು ಗರಂ ಆಗಿದ್ದರು. ನಿನ್ನೆ ಮಾಜಿ ಸಿಎಂ ಬಿಎಸ್ವೈ ಕೂಡಾ ಶ್ರೀಗಳಿಗೆ ಶಿಕ್ಷೆಯಾಗಲಿ ಎಂದಿದ್ದರು.
murugha shree – Shamanur Sivashankarappa sparked against Muruga Shri








