ಶಿವಣ್ಣ ನಟನೆಯ ವೇದ ಟೀಸರ್ ನವೆಂಬರ್ 11 ಕ್ಕೆ ಬಿಡುಗಡೆ…
ಡಾ ಶಿವರಾಜ್ ಕುಮಾರ್ ನಟನೆಯ 125ನೇ ಚಿತ್ರ “ವೇದ” ಟೀಸರ್ ಬಿಡುಗಡೆಗೆ ಮುಹೂರ್ತ್ ಫಿಕ್ಸ್ ಆಗಿದೆ. ನವೆಂಬರ್ 11 ರಂದು ವೇದ ಟೀಸರ್ ಬಿಡುಗಡೆಯಾಗುತ್ತಿದೆ.
ಹರ್ಷ ನಿರ್ದೇಶನದ ಈ ಚಿತ್ರ ಡಿಸೆಂಬರ್ 23 ರಂದು ಥಿಯಟರ್ ಗಳಲ್ಲಿ ಬಿಡುಗಡೆಯಗಲಿದೆ. ವಜ್ರಕಾಯ, ಭಜರಂಗಿ, ಮತ್ತು ಭಜರಂಗಿ 2 ನಂತರ 4 ನೇ ಚಿತ್ರಕ್ಕಾಗಿ ಹರ್ಷ ಮತ್ತು ಶಿವರಾಜ್‌ಕುಮಾರ್ ಒಂದಾಗಿದ್ದಾರೆ.
ಅರ್ಜುನ್ ಜನ್ಯ ಅವರ ಸಂಗೀತದೊಂದಿಗೆ, ವೇದ ಚಿತ್ರಕ್ಕೆ ಸ್ವಾಮಿ ಜೆ ಅವರ ಛಾಯಾಗ್ರಹಣವಿದೆ. ಇದೇ ವೇಳೆ, ನವೆಂಬರ್ 27 ರಂದು ಮೈಸೂರಿನಲ್ಲಿ ನಡೆಯಲಿರುವ ಪ್ರಿ ರಿಲೀಸ್ ಈವೆಂಟ್ ನಲ್ಲಿ ಮೊದಲ ಹಾಡು ಬಿಡುಗಡೆಯಾಗಲಿದೆ.
ಜೀ ಸ್ಟುಡಿಯೋಸ್ ಸಹಯೋಗದೊಂದಿಗೆ ಗೀತಾ ಪಿಕ್ಚರ್ಸ್ ನಿರ್ಮಿಸಿರುವ ವೇದಾ ಚಿತ್ರದಲ್ಲಿ ಗಾನವಿ ಲಕ್ಷ್ಮಣ್ ನಾಯಕಿಯಾಗಿ ನಟಿಸಿದ್ದಾರೆ ಮತ್ತು ಶ್ವೇತಾ ಚೆಂಗಪ್ಪ ಮತ್ತು ಅದಿತಿ ಸಾಗರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
Vedha’s first teaser to highlight weapons








