Lucky Man: ಅಪ್ಪು ದೇವರಾಗಿದ್ದ ಚಿತ್ರ ಕಿರುತೆರೆ ಬಿಡುಗಡೆಗೆ ಸಿದ್ಧತೆ…
ಕನ್ನಡದಲ್ಲಿ ಅಪ್ಪು ಅಭಿನಯದ ಕೊನೆಯ ಸಿನಿಮಾ, ಡಾರ್ಲಿಂಗ್ ಕೃಷ್ಣ ನಟನೆಯ ‘ಲಕ್ಕಿ ಮ್ಯಾನ್’ ಸಿನಿಮಾ ರಿಲೀಸ್ ಆಗಿ ಥಿಯೇಟರ್ ಗಳಲ್ಲಿ ಉತ್ತಮ ಪ್ರದರ್ಶನ ಕಂಡು ಆ ನಂತರ ಒಟಿಟಿಯಲ್ಲೂ ರಿಲೀಸ್ ಆಗಿತ್ತು.
ಅಲ್ಲಿ ಅಭಿಮಾನಿಗಳು ಸಿನಿಮಾದಲ್ಲಿ ದೇವರಾಗಿರುವ ಅಪ್ಪುನನ್ನ ಕಣ್ತುಂಬಿಕೊಂಡರು. ಇದೀಗ ಲಕ್ಕಿ ಮ್ಯಾನ್ ಟಿವಿಗೆ ಬರುತ್ತಿದೆ. ಅಪ್ಪು ದೇವರ ರೂಪದಲ್ಲಿ ಕಾಣಿಸಿಕೊಂಡ ಸಿನಿಮಾ ‘ಲಕ್ಕಿ ಮ್ಯಾನ್’ ಸ್ಟಾರ್ ಸುವರ್ಣದಲ್ಲಿ ಪ್ರಸಾರ ಆಗಲಿದೆ.
ಲಕ್ಕಿ ಮ್ಯಾನ್ ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ ಹಾಗೂ ನಟಿ ಸಂಗೀತ ಶೃಂಗೇರಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಆದ್ರೆ ಸಿನಿಮಾದ ಹೈಲೇಟ್ ಅಪ್ಪು ಅಂತಲೇ ಹೇಳಬಹುದು.. ಈ ಸಿನಿಮಾ ಇದೇ ಭಾನುವಾರ (ನವೆಂಬರ್ 13) ಸಂಜೆ 7 ಗಂಟೆಗೆ ಪ್ರಸಾರವಾಗಲಿದೆ.
ಸದ್ಯ ಅಪ್ಪು ಡ್ರೀಮ್ ಪ್ರಾಜೆಕ್ಟ್ ಗಂಧದಗುಡಿ ಸಾಕ್ಷ್ಯ ಚಿತ್ರವೂ ಕೂಡ ಥಿಯೇಟರ್ ಗಳಲ್ಲಿ ಉತ್ತಮ ರೆಸ್ಪಾನ್ಸ್ ಪಡೆದುಕೊಳ್ತಿದೆ.
Lucky Man: Preparing for the OTT release of Appu Deva’s film…








