ಮಾಲ್ಡೀವ್ಸ್ ಕಟ್ಟದಲ್ಲಿ ಬೆಂಕಿ – 9 ಭಾರತೀಯ ಮತ್ತು ಒಬ್ಬ ಬಾಂಗ್ಲಾ ಪ್ರಜೆ ಸಾವು…
ಗ್ಯಾರೇಜ್ ನಲ್ಲಿ ಅಗ್ನಿ ಅಪಘಾತ ಸಂಭವಿಸಿ ಕನಿಷ್ಠ 10 ಮಂದಿ ಸಾವನ್ನಪ್ಪಿರುವ ಘಟನೆ ಮಾಲ್ಡೀವ್ಸ್ ರಾಜಧಾನಿ ಮಾಲೆಯಲ್ಲಿ ನಡೆದಿದೆ. ಘಟನೆಯಲ್ಲಿ 9 ಮಂದಿ ಭಾರತೀಯರು ಮತ್ತು ಒಬ್ಬ ಬಾಂಗ್ಲಾದೇಶದ ಪ್ರಜೆ ಸಾವನ್ನಪ್ಪಿದ್ದಾರೆ ಎಂದು ಭದ್ರತಾ ಅಧಿಕಾರಿಗಳು ಗುರುತಿಸಿದ್ದಾರೆ.
ಮಾಲ್ಡೀವ್ಸ್‌ನಲ್ಲಿರುವ ಭಾರತೀಯ ಹೈಕಮಿಷನ್ ಮಾಲೆಯಲ್ಲಿ ಸಂಭವಿಸಿದ ದುರಂತ ಬೆಂಕಿಯ ಘಟನೆಯ ಬಗ್ಗೆ ದುಃಖ ವ್ಯಕ್ತಪಡಿಸಿದೆ. “ಮಾಲೆಯಲ್ಲಿ ಸಂಭವಿಸಿದ ಅಗ್ನಿ ದುರಂತದ ಘಟನೆ ಭಾರತೀಯ ಪ್ರಜೆಗಳು ಸೇರಿದಂತೆ ಜೀವಹಾನಿಯನ್ನುಂಟು ಮಾಡಿದೆ” ಎಂದು ಹೇಳಿದ್ದಾರೆ.
10 killed in fire in Maldives, 9 #Indian nationals among those killed.#fire #male #Maldives pic.twitter.com/dDSoVKEami
— Sanjeev (@wing4destiny) November 10, 2022
ನೆಲ ಅಂತಸ್ತಿನ ವಾಹನ ರಿಪೇರಿ ಗ್ಯಾರೇಜ್ ನಲ್ಲಿ ಕಾಣಿಸಿಕೊಂಡ ಬೆಂಕಿ ಇಡೀ ಕಟ್ಟವನ್ನ ಆವರಿಸಿಕೊಂಡಿದೆ ಇಲ್ಲಿಯವರೆಗೆ 10 ಮೃತ ದೇಹಗಳನ್ನ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾಲ್ಡೀವ್ಸ್ ನಲ್ಲಿ ವಿದೇಶಿ ಕಾರ್ಮಿಕರು ಹೆಚ್ಚಾಗಿದ್ದು, ಹೆಚ್ಚಾಗಿ ಬಾಂಗ್ಲಾದೇಶ, ಭಾರತ, ನೇಪಾಳ, ಪಾಕಿಸ್ತಾನ ಮತ್ತು ಶ್ರೀಲಂಕಾದಿಂದ ಆಗಮಿಸಿದ್ದಾರೆ ಎಂದು ಭಾವಿಸಲಾಗಿದೆ.
9 Indians, 1 Bangladeshi National Killed In Massive Fire In Maldives’ Male








