Gujarat elections : ಕ್ರಿಕೆಟಿಗ ರವೀಂದ್ರ ಜಡೆಜಾ ಪತ್ನಿ ರಿವಾಬಗೆ ಬಿಜೆಪಿ ಟಿಕೆಟ್…
ಗುಜರಾತ್ ವಿಧಾನಸಭಾ ಚುನಾವಣೆಯ ಪ್ರಯುಕ್ತ ಬಿಜೆಪಿ ಇಂದು 160 ಮಂದಿ ಅಭ್ಯರ್ಥಿಗಳನ್ನೊಳಗೊಂಡ ಮೊದಲ ಪಟ್ಟಿಯನ್ನ ಪ್ರಕಟ ಮಾಡಿದ್ದಾರೆ. ವಿಶೇಷವೆಂದರೆ ಈ ಭಾರಿ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಕ್ರಿಕೆಟಿಗ ರವೀಂದ್ರ ಜಡೇಜಾ ಪತ್ನಿ ರಿವಾಬಾ ಜಡೇಜಾ ಅವರಿಗೂ ಬಿಜೆಪಿ ಟಿಕೆಟ್ ನಿಡಿದೆ.
ಗುಜರಾತ್ ನಲ್ಲಿ 182 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಡಿಸೆಂಬರ್ 1 ಮತ್ತು 5 ರಂದು ಮತದಾನ ನಡೆಯಲಿದೆ. ರವೀಂದ್ರ ಜಡೇಜಾ ಅವರ ಪತ್ನಿ ರಿವಾ ಅವರು ಬಿಜೆಪಿ ಕಡೆಯಿಂದ ಉತ್ತರ ಜಾಮ್‌ನಗರದಿಂದ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಅದೇ ರೀತಿ ಮೋರ್ಬಿಯಲ್ಲಿ ಕೇಬಲ್ ಸೇತುವೆ ಕುಸಿದು ಬಿದ್ದಾಗ ಧೈರ್ಯದಿಂದ ನದಿಗೆ ಹಾರಿ ಕೆಲವರನ್ನು ರಕ್ಷಿಸಲು ಯತ್ನಿಸಿದ ಮಾಜಿ ಶಾಸಕ ಕಾಂತಿಲಾಲ್ ಅಮೃತಯ್ಯ ಅವರಿಗೂ ಟಿಕೆಟ್ ನೀಡಲಾಗಿದೆ.
ಟಿಕೆಟ್ ದೊರೆತ ನಂತರ ರವೀಂದ್ರ ಜಡೆಜಾ ಜೈ ಹಿಂದ್ ಎಂದು ಟ್ವೀಟ್ ಮಾಡಿದ್ದಾರೆ. ಅವಳ ಶ್ರಮದ ಬಗ್ಗೆ ಹೆಮ್ಮೆ ಇದೆ. ಸಮಾಜದ ಅಭಿವೃದ್ಧಿಗೆ ನಿರಂತರ ಶ್ರಮಿಸಲಿ ಎಂದು ಹಾರೈಸಿದ್ದಾರೆ. ಮತ್ತು ತಮ್ಮ ಪತ್ನಿ ರಿವಾ ಅವರ ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಜಡೇಜಾ ಧನ್ಯವಾದ ತಿಳಿಸಿದ್ದಾರೆ.
ಸಾರ್ವಜನಿಕ ಸೇವೆ ಮಾಡಲು ಅವಕಾಶ ಕಲ್ಪಿಸಿದ್ದಕ್ಕಾಗಿ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ.
ಉತ್ತರ ಜಾಮ್‌ನಗರದ ಶಾಸಕ ಧರ್ಮೇಂದ್ರ ಸಿಂಗ್ ಎಂ ಜಡೇಜಾ ಅವರನ್ನ ಪಕ್ಕಕ್ಕೆ ಸರಿಸಿ ಬಿಜೆಪಿ ರಿವಾ ಅವರಿಗೆ ಟಿಕೆಟ್ ನೀಡಿದೆ. ರಿವಾಬಾ ಮೆಕ್ಯಾನಿಕಲ್ ಎಂಜಿನಿಯರಿಂಗ್ ಓದಿದ್ದಾರೆ. ರಿವಾ ಅವರು 2016 ರಲ್ಲಿ ರವೀಂದ್ರ ಜಡೇಜಾ ಅವರನ್ನ ವಿವಾಹವಾಗಿದ್ದರು.








