Virat Kohli | ಹೊಸ ವಿಶ್ವದಾಖಲೆ ನಿರ್ಮಿಸಿದ ಕೊಹ್ಲಿ
ಟಿ 20 ವಿಶ್ವಕಪ್ ನಲ್ಲಿ ಟೀಂ ಇಂಡಿಯಾದ ಬ್ಯಾಟರ್ ವಿರಾಟ್ ಕೊಹ್ಲಿ ಸೂಪರ್ ಫಾರ್ಮ್ ನಲ್ಲಿದ್ದಾರೆ.
ಇಂಗ್ಲೆಂಡ್ ವಿರುದ್ಧ ನಡೆದ ಸೆಮೀಸ್ ನಲ್ಲೂ ವಿರಾಟ್ ಕೊಹ್ಲಿ ಅರ್ಧಶತಕ ಸಿಡಿಸಿ ಮುಂಚಿದ್ದಾರೆ.
ಈ ಪಂದ್ಯದಲ್ಲಿ 40 ಎಸೆತಗಳನ್ನು ಎದುರಿಸಿದ ವಿರಾಟ್ ಕೊಹ್ಲಿ 50 ರನ್ ಗಳಿಸಿದರು.
ಇದು ಈ ಮೆಗಾ ಈವೆಂಟ್ ನಲ್ಲಿ ವಿರಾಟ್ ಕೊಹ್ಲಿ ದಾಖಲಿಸಿದ ನಾಲ್ಕನೇ ಅರ್ಧಶತಕವಾಗಿದೆ.
ಅದೇ ರೀತಿಯಲ್ಲಿ ಈ ಟೂರ್ನಿಯಲ್ಲಿ ಟಾಪ್ ರನ್ ಸ್ಕೋರರ್ ಆಗಿದ್ದಾರೆ.
ವಿರಾಟ್ ಈ ಟೂರ್ನಿಯಲ್ಲಿ 296 ರನ್ ಗಳಿಸಿದ್ದಾರೆ.
ಅಂತರಾಷ್ಟ್ರೀಯ ಟಿ 20 ಕ್ರಿಕೆಟ್ ನಲ್ಲಿ ವಿರಾಟ್ ಕೊಹ್ಲಿ ಅವರು ಅಪರೂಪದ ಸಾಧನೆ ಮಾಡಿದ್ದಾರೆ.

ಟಿ 20 ಕ್ರಿಕೆಟ್ ನಲ್ಲಿ ನಾಲ್ಕು ಸಾವಿರ ರನ್ ಗಳ ಗಡಿದಾಟಿದ್ದಾರೆ. ಆ ಮೂಲಕ ಈ ಮೈಲಿಗಲ್ಲು ತಲುಪಿದ ಮೊದಲ ಬ್ಯಾಟರ್.
ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ 42 ರನ್ ಗಳಸಿದ್ದಾಗ ವಿರಾಟ್ ಕೊಹ್ಲಿ ಈ ಸಾಧನೆಯನ್ನು ತಮ್ಮ ಖಾತೆಗೆ ಹಾಕಿಕೊಂಡರು.
ಇಲ್ಲಿಯವರೆಗೂ 115 ಪಂದ್ಯಗಳನ್ನಾಡಿರುವ ವಿರಾಟ್ ಕೊಹ್ಲಿ 4008 ರನ್ ಗಳಿಸಿದ್ದಾರೆ. ನಂತರದ ಸ್ಥಾನದಲ್ಲಿ 3853 ರನ್ ಗಳೊಂದಿಗೆ ರೋಹಿತ್ ಶರ್ಮಾ ಇದ್ದಾರೆ.








