Dravid – ಕೊಹ್ಲಿ ವಿದಾಯದ ಬಗ್ಗೆ ದ್ರಾವಿಡ್ ಹೇಳಿದ್ದೇನು ?
ಟಿ 20 ವಿಶ್ವಕಪ್ 2022 ಸೆಮಿಫೈನಲ್ ನಲ್ಲಿ ಭಾರತ ತಂಡ ಘೋರ ಪರಾಭವ ಅನುಭವಿಸಿದೆ.
ಇಂಗ್ಲೆಂಡ್ ವಿರುದ್ಧ 10 ವಿಕೆಟ್ ಗಳ ಅಂತರದಲ್ಲಿ ಸೋತ ಟೀಂ ಇಂಡಿಯಾ, ಟೂರ್ನಿಯಿಂದ ಹೊರಬಿದ್ದಿದೆ.
ಭಾರತ ನೀಡಿದ 169 ರನ್ ಗಳ ಗುರಿಯನ್ನ ಒಂದೇ ಒಂದು ವಿಕೆಟ್ ನಷ್ಟವಿಲ್ಲದೇ ಇಂಗ್ಲೆಂಡ್ ತಂಡ ತಲುಪಿತು.
ಈ ಮ್ಯಾಚ್ ನಲ್ಲಿ ಭಾರತ ತಂಡದ ಬೌಲರ್ ಗಳು ಪೂರ್ತಿಯಾಗಿ ವಿಫಲರಾದರು.
ಪಂದ್ಯದ ಬಳಿಕ ಪ್ರೆಸ್ ಮೀಟ್ ನಲ್ಲಿ ಟೀಂ ಇಂಡಿಯಾದ ಕೋಚ್ ರಾಹುಲ್ ದ್ರಾವಿಡ್ ಮಾತನಾಡಿದ್ದು, ಸಿನಿಯರ್ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ವಿದಾಯದ ಬಗ್ಗೆ ಪ್ರತಿಕ್ರಿಯೆ ನೀಡಿದರು.

ಈಗಲೇ ಈ ಬಗ್ಗೆ ಮಾತನಾಡುವುದು ಸೂಕ್ತವಲ್ಲ. ಕೊಹ್ಲಿ, ರೋಹಿತ್ ಶರ್ಮಾ ಎಷ್ಟು ವರ್ಷ ಆಡಬೇಕು ಎಂಬುದು ಅವರ ನಿರ್ಧಾರದ ಮೇಲೆ ನಿಂತಿದೆ. ಅದಕ್ಕೆ ಇನ್ನೂ ಸಮಯವಿದೆ ಎಂದಿದ್ದಾರೆ.
ವಿದೇಶಿ ಲೀಗ್ ಗಳಲ್ಲಿ ಭಾರತೀಯರು ಆಡುವುದರ ಬಗ್ಗೆ ಮಾತನಾಡಿದ ರಾಹುಲ್ ದ್ರಾವಿಡ್, ಆ ರೀತಿ ಮಾಡಿದ್ರೆ ದೇಶಿಯ ಕ್ರಿಕೆಟ್ ಗೆ ಫುಲ್ ಸ್ಟಾಪ್ ಇಟ್ಟಂತೆ ಆಗುತ್ತದೆ.
ಇತರೆ ಆಟಗಾರರಂತೆ ಇಲ್ಲಿ ಬಂದು ಆಡಿದ್ರೆ ಚೆನ್ನಾಗಿರುತ್ತದೆ. ಅದರಲ್ಲಿ ಯಾವುದೇ ಸಂದೇಹವಿಲ್ಲ. ಆದ್ರೆ ಇದು ಭಾರತ ಕ್ರಿಕೆಟ್ ಗೆ ತುಂಬಾ ಕಷ್ಟ ಎಂದಿದ್ದಾರೆ.








