Sania- Malik – ಮಲಿಕ್ – ಸಾನಿಯಾ ದಾಂಪತ್ಯದಲ್ಲಿ ಬಿರುಕು.. ಕಾರಣ ಆ ಸಂಬಂಧ ?
ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಮತ್ತು ಪಾಕಿಸ್ತಾನದ ಕ್ರಿಕೆಟರ್ ಶೋಯೆಬ್ ಮಲಿಕ್ ದಾಂಪತ್ಯದಲ್ಲಿ ಬಿರುಕು ಮೂಡಿದ್ಯಾ ? ಪ್ರೀತಿಸಿ ಮದುವೆಯಾದ ಸಾನಿಯಾ ರನ್ನ ನಡು ದಾರಿಯಲ್ಲಿ ಕೈ ಬಿಟ್ರಾ ಶೋಯೆಬ್ ? ಮಾಡೆಲ್ ಮಾಯೆಗೆ ಮರುಳಾಗಿ ಮೂಗುತ್ತಿ ಸುಂದರಿಗೆ ಮೋಸಾ ಮಾಡಿದ್ರಾ ಮಲಿಕ್ ? ಸದ್ಯ ಸೋಶಿಯಲ್ ಮೀಡಿತಯಾದಲ್ಲಿ ಟ್ರೆಂಡ್ ಆಗುತ್ತಿರುವ ಪ್ರಶ್ನೆಗಳು ಇವು.
ಸ್ಟಾರ್ ದಂಪತಿಗಳೆಂದೇ ಗುರುತಿಸಿಕೊಂಡಿದ್ದ ಮಲಿಕ್ – ಸಾನಿಯಾ 2010 ರಲ್ಲಿ ಪ್ರೀತಿಸಿ ಮದುವೆಯಾಗಿದ್ದರು. ಇದೀಗ 12 ವರ್ಷಗಳ ಬಳಿಕ ಇವರ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂಬ ವದಂತಿಗಳು ಹರಿದಾಡುತ್ತಿವೆ. ಇದಕ್ಕೆ ಸಾನಿಯಾ ಮಿರ್ಜಾ ತಮ್ಮ ಇನ್ ಸ್ಟಾ ಗ್ರಾಂನಲ್ಲಿ ಹಾಕಿದ್ದ ಪೋಸ್ಟ್ ವೊಂದು ಇಂಬು ನೀಡುತ್ತಿದೆ.
ಹಾಗಾದ್ರೆ ಸಾನಿಯಾ ಇನ್ ಸ್ಟಾದಲ್ಲಿ ಹಾಕಿರುವ ಪೋಸ್ಟ್ ಏನು ಅಂತಾ ನೋಡೋದ್ರಾದ್ರೆ, ಒಡೆದ ಹೃದಯಗಳು ಎಲ್ಲಿಗೆ ಹೋಗುತ್ತವೆ, ಅಲ್ಲಾನನ್ನು ಹುಡುಕಲು ಎಂದು ಬರೆದುಕೊಂಡಿದ್ದಾರೆ. ಇದಲ್ಲದೆ ಕೆಲವು ದಿನಗಳ ಹಿಂದೆ ತಮ್ಮ ಮಗನೊಂದಿಗಿರುವ ಚಿತ್ರವನ್ನು ಹಂಚಿಕೊಂಡಿದ್ದ ಸಾನಿಯಾ ಕಷ್ಟದ ದಿನಗಳಲ್ಲಿ ನನಗೆ ಸಿಕ್ಕ ಕ್ಷಣಗಳು ಎಂದು ಬರೆದುಕೊಂಡಿದ್ದರು.
ಇದು ಸಾಕಷ್ಟು ಊಹಾಪೋಹಗಳಿಗೆ ದಾರಿ ಮಾಡಿಕೊಟ್ಟಿದೆ. ಈ ಸ್ಟಾರ್ ದಂಪತಿ ದಾಂಪತ್ಯದಲ್ಲಿ ಎಲ್ಲವೂ ಸರಿಯಿಲ್ಲ ಎಂಬೋದನ್ನ ಸಾರಿ ಹೇಳುತ್ತಿದೆ.

ಹಾಗಾದ್ರೆ ಪ್ರೀತಿಸಿ ಮದುವೆಯಾದ ಈ ಇಬ್ಬರ ದಾಂಪತ್ಯದಲ್ಲಿ ಬಿರುಕು ಮೂಡಲು ಕಾರಣವೇನು..? ಅನ್ನೋ ಪ್ರಶ್ನೆಗೆ ಸಿಗುವ ಉತ್ತರ… ಶೋಯೆಬ್ ಮಲಿಕ್ ರ ಆ ಸಂಬಂಧ..!!
ಹೌದು..! ಪಾಕಿಸ್ತಾನ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಮಾಹಿತಿ ಪ್ರಕಾರ ಶೋಯೆಬ್ ಮಿಲಿಕ್, ಸಾನಿಯಾ ಮಿರ್ಜಾ ಅವರಿಗೆ ಮೋಸ ಮಾಡಿದ್ದಾರಂತೆ, ಅಂದರೇ ಶೋಯೆಬ್ ಮಲಿಕ್ ಪಾಕಿಸ್ತಾನ ಮೂಲದ ಮಾಡೆಲ್ ನೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದಾರಂತೆ. ಇದರಿಂದ ನೊಂದಿರುವ ಸಾನಿಯಾ ಮಿರ್ಜಾ ವಿಚ್ಛೇದನಕ್ಕೆ ಮುಂದಾಗಿದ್ದಾರಂತೆ.
ಕೆಲವು ವರ್ಷಗಳ ಹಿಂದೆ ಮಲಿಕ್ ಅವರಿಗೆ ಮಾಡೆಲ್ ಒಬ್ಬರು ಪರಿಚಯವಾಗಿದ್ದು, ಈ ಪರಿಚಯ ನಂತರ ಪ್ರೇಮಕ್ಕೆ ತಿರುಗಿದೆ. ಮಾಡೆಲ್ ಮಾಯೆಗೆ ಮರುಳಾದ ಮಲಿಕ್ ಬಗ್ಗೆ ಸಾನಿಯಾ ತಿಳಿದುಕೊಂಡಿದ್ದಾಳಂತೆ. ಇದರಿಂದ ವಿಚ್ಛೇದನಕ್ಕೆ ಮುಂದಾಗಿದ್ದಾರೆ ಅಂತಾ ಸುದ್ದಿ ಹರಿದಾಡುತ್ತಿದೆ.
ಆದ್ರೆ ಈ ಬಗ್ಗೆ ಇಲ್ಲಿಯವರೆಗೂ ಇಬ್ಬರಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಈ ವದಂತಿಗಳಿಗೆ ಅವರೇ ಉತ್ತರಿಸಬೇಕಾಗಿದೆ.








