lecturer committed suicide-ಆತ್ಮಹತ್ಯೆ ಮಾಡಿಕೊಂಡ ಟೀಚರ್!
ಹಣ ಹೂಡಿಕೆ ಮಾಡಿ ವಂಚನೆಗೆ ಒಳಗಾದ ಉಪನ್ಯಾಸಕಿ
ಬಾವಿಗೆ ಹಾರಿ ಆತ್ಮಹತ್ಯೆ
2.50 ಲಕ್ಷ ಹಣ ಹೂಡಿಕೆ
ಹಣ ಹೂಡಿಕೆಯ ಏಜೆನ್ಸಿ ಬಗ್ಗೆ ಡೆತ್ನೋಟ್ನಲ್ಲಿ ಉಲ್ಲೇಖ
ಸುದ್ದಿ
ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಇಸ್ಲಾಂಪುರ ಗ್ರಾಮದಲ್ಲಿ ಶಿಕ್ಷಕಿಯೋಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೇಳಕಿಗೆ ಬಂದಿದೆ.
ಆನ್ಲೈನ್ನಲ್ಲಿ ಸರಿಸುಮಾರು 2.50 ಲಕ್ಷ ಹಣ ಹೂಡಿಕೆ ಮಾಡಿ ಉಪನ್ಯಾಸಕಿ ವಂಚನೆಗೆ ಒಳಗಾಗಿ ಆತ್ಮ ಹತ್ಯೆಗೆ ಶರಣಾಗಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡ ಶಿಕ್ಷಕಿ ಆರತಿ ಕನಾಟೆ ಎಂದು ತಿಳಿದು ಬಂದಿದ್ದು. ಆನ್ಲೈನ್ನಲ್ಲಿ ಪರಿಚಯವಾದ ವ್ಯಕ್ತಿಯೊಂದಿಗೆ ಹಣದ ವ್ಯವಹಾರ ನಡೆಸಿ ಮೋಸ ಹೋಗಿದ್ದರು.
ಆನ್ಲೈನ್ನಲ್ಲಿ ಮನೆಯಲ್ಲೇ ಕುಳಿತು ಉದ್ಯಮ ಮಾಡಲು ಹಣ ಹೂಡಿಕೆ ಮಾಡಿ ಎಂದ ವ್ಯಕ್ತಿಯ ಮಾತನ್ನು ನಂಬಿದ ಶಿಕ್ಷಕಿ ಇನ್ನೂ 82 ಸಾವಿರ ಹಣ ಕಳಿಸಿದ್ರೆ ಉದ್ಯೋಗದ ಜೊತೆಗೆ ಹೂಡಿಕೆ ಮಾಡಿದ ಎಲ್ಲಾ ಹಣವನ್ನು ಮರಳಿಕೊಡುವುದಾಗಿ ಹೇಲಿದ್ದನಂತೆ.
ಶಿಕ್ಷಕಿಯು ಈ ಹುಡಿಕೆಯನ್ನು ಮನೆಯವರಿಗೆ ತಿಳಿಸದೆ ಲಕ್ಷಾಂತರ ರೂಪಾಯಿ ಹಾಕಿ ಕಳೆದುಕೊಂಡು ಬಯದಿಂದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆತ್ಮಹತ್ಯೆಯ ಮೊದಲು ಹಣ ಹೂಡಿಕೆ ಮಾಡಿದ್ದ ಏಜೆನ್ಸಿ ಕುರಿತು ಡೆತ್ನೋಟ್ನಲ್ಲಿ ಉಲ್ಲೇಖ ಮಾಡಿ ಉಪನ್ಯಾಸಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ . ಬಸವಕಲ್ಯಾಣ ನಗರದ ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಪ್ರಕರಣ ಬಸವಕಲ್ಯಾಣ ಗ್ರಾಮೀಣ ಠಾಣೆಯಲ್ಲಿ ದಾಖಲಾಗಿದೆ.








