IPL 2023 – 9 ಆಟಗಾರರನ್ನು ಉಳಿಸಿಕೊಳ್ಳುತ್ತಾ RCB ?
ಇಂಡಿಯನ್ ಪ್ರಿಮಿಯರ್ ಲೀಗ್ ಸೀಸನ್ 16ಕ್ಕಾಗಿ ಐಪಿಎಲ್ ಫ್ರಾಂಚೈಸಿಗಳು ತಯಾರಿ ಆರಂಭಿಸಿವೆ.
ಮುಂದಿನ ತಿಂಗಳು ಐಪಿಎಲ್ ನ ಮಿನಿ ಹರಾಜು ನಡೆಯಲಿದೆ.
ಇದಕ್ಕಾಗಿ ಎಲ್ಲಾ ತಂಡಗಳು ತಯಾರಿ ಆರಂಭಿಸಿದ್ದು, ತಮ್ಮದೇಯಾದ ಲೆಕ್ಕಾಚಾರಗಳಲ್ಲಿ ತೊಡಗಿಕೊಂಡಿವೆ.
ಈ ನಡುವೆ ಇಂಡಿಯನ್ ಪ್ರಿಮಿಯರ್ ಲೀಗ್ ನ ಸೂಪರ್ ಸ್ಟಾರ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೂಡ ಬಲಿಷ್ಠ ತಂಡ ಕಟ್ಟಲು ಸಜ್ಜಾಗಿದೆ.
ಐಪಿಎಲ್ ಆರಂಭವಾದ ದಿನದಿಂದಲೂ ಟೈಟಲ್ ಗಾಗಿ ಜಾತಕ ಪಕ್ಷಿಯಂತೆ ಕಾಯುತ್ತಿರುವ ಆರ್ ಸಿಬಿ ತಂಡ ಈ ಬಾರಿ ಕಪ್ ಗೆಲ್ಲಲೇಬೇಕೆಂದು ಪಣ ತೊಟ್ಟು ಬಲಿಷ್ಠ ತಂಡವನ್ನು ಕಟ್ಟಲು ಪಣ ತೊಟ್ಟಿವೆ.
ಆಟಗಾರರನ್ನು ಅಳೆದು ತೂಗಿ ಆಯ್ಕೆ ಮಾಡುತ್ತಿದೆ. ಇದಕ್ಕಾಗಿ ಒಳ್ಳೆಯ ಆಟಗಾರರನ್ನು ಖರೀದಿ ಮಾಡಲು ಯೋಚಿಸಿದೆ.
ಮೂಲಗಳ ಪ್ರಕಾರ ಆರ್ಸಿಬಿ ಯಾರನ್ನು ತಂಡದಿಂದ ಕೈಬಿಡುತ್ತೆ ಯಾರನ್ನು ಉಳಿಸಿಕೊಳ್ಳುತ್ತೆ ಅನ್ನೊದರ ಡಿಟೇಲ್ಸ್ ಇಲ್ಲಿದೆ.

ರಿಟೇನ್ ಆಗಬಹುದಾದ ಆಟಗಾರರು:ಫಾಫ್ ಡುಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಗ್ಲೇನ್ ಮ್ಯಾಕ್ಸ್ ವೆಲ್, ದಿನೇಶ್ ಕಾರ್ತಿಕ್,ವನಿಂದು ಹಸರಂಗ, ಮೊಹ್ಮದ್ ಸೀರಾಜ್, ಹರ್ಷಲ್ ಪಟೇಲ್, ಶಹಬಾಜ್ ಅಹ್ಮದ್, ರಜತ್ ಪಾಟಿದಾರ್
ಈ ಆಟಗಾರರ ಸದ್ಯ ಸೂಪರ್ ಫಾರ್ಮ್ ನಲ್ಲಿದ್ದಾರೆ. ಹಾಗೇ ಕಳೆದ ಐಪಿಎಲ್ ನಲ್ಲಿ ಆರ್ ಸಿಬಿ ಪರ ಅದ್ಭುತ ಪ್ರದರ್ಶನ ನೀಡಿದ್ದರು.
ಹೀಗಾಗಿ ಈ ಆಟಗಾರರನ್ನು ಆರ್ ಸಿಬಿ ಫ್ರಾಂಚೈಸಿ ಉಳಿಸಿಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ.
ಇನ್ನು ಯಾವೆಲ್ಲಾ ಆಟಗಾರರನ್ನು ರಿಲೀಸ್ ಮಾಡಬಹುದು ಅಂತಾ ನೋಡುವುದಾದ್ರೆ, ಸಿದ್ಧಾರ್ಥ್ ಕೌಲ್, ಕರಣ್ ಶರ್ಮಾ, ಡೆವಿಡ್ ವಿಲ್ಲಿ, ಆಕಾಶ್ ದೀಪ್, ಜಾಸನ್ ಬೆಹ್ರೆನ್ ಡ್ರಾಫ್.








