Minister V. Somanna – ಬಡತನದಲ್ಲಿರುವ ಪ್ರತಿಯೊಬ್ಬರಿಗೂ ಸೂರು ಸಿಗುವಂತಾಗಬೇಕು
ಬೆಂಗಳೂರು : ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಾಗರಬಾವಿ ವಾರ್ಡಿನ ಅರುಂದತಿನಗರದಲ್ಲಿ ಯುವಶಕ್ತಿ ಗೆಳೆಯರ ಬಳಗದವರು ಆಯೋಜಿಸಿದ್ದ 67ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಚಿವ ವಿ.ಸೋಮಣ್ಣ ರವರು ಧ್ವಜಾರೋಹಣವನ್ನು ನೆರವೇರಿಸಿದರು.
ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದ ಸಚಿವರು ಶ್ರೀಮಂತರಿರುವ ಪ್ರದೇಶಗಳಲ್ಲಿ ಯಾವ ಉತ್ಸವಗಳು ಇರುವುದಿಲ್ಲ, ಆದರೆ ಸಾಮಾನ್ಯರು, ಬಡವರು ಇದ್ದ ಕಡೆ ದೇವರು ಇರುತ್ತಾನೆ, ಸಂಸ್ಕಾರ ಇರುತ್ತದೆ. ಹಿಂದೂ, ಮುಸಲ್ಮಾನ, ಕ್ರೈಸ್ತರು ಎಂಬ ಭಾವನೆ ಇಲ್ಲದೆ ಒಗ್ಗಟ್ಟಿನಿಂದ ಇದ್ದಾರೆ.
೪೫ ವರ್ಷಗಳಿಂದ ನಾನು ನೋಡುತ್ತಿರುವ ಈ ಪ್ರದೇಶ ಒಂದು ಕಲ್ಲಿನ ಬಂಡೆಯಂತಿತ್ತು, ಅರುಂದತಿನಗರದಲ್ಲಿ 5 ರಿಂದ 6 ಪರ್ಸೆಂಟ್ ಸೀಟಿನ ಮನೆಗಳಿವೆ, ಅವರು ಸಹ ಉತ್ತಮ ಮನೆಗಳನ್ನು ಕಟ್ಟುವಂತಾಗಬೇಕೆಂಬುದು ನನ್ನ ಆಸೆ. ಬಡವರು ಬಾಡಿಗೆ ಕಟ್ಟಲಾಗದೇ ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ. ಬಡತನದಲ್ಲಿರುವ ಪ್ರತಿಯೊಬ್ಬರಿಗೂ ಸೂರು ಕಲ್ಪಿಸುವ ನಿಟ್ಟಿನಲ್ಲಿ 52,000 ಮನೆಗಳನ್ನು ಬೆಂಗಳೂರಿನಲ್ಲಿ ನಿರ್ಮಿಸುತ್ತಿದ್ದೇವೆ ಎಂದರು.
ಇದೇ ವೇಳೆ ಸಚಿವರು ಕೋಟಿ ಕಂಠ ಗಾಯನದ ಅಭಿನಂದನಾ ಪತ್ರವನ್ನು ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಬಿಬಿಎಂಪಿ ಮಾಜಿ ಸದಸ್ಯ ಮೋಹನ್ ಕುಮಾರ್, ಮಂಜುನಾಥ್, ಸ್ಥಳೀಯ ಮುಖಂಡರು ಹಾಗೂ ಕನ್ನಡಾಭಿಮಾನಿಗಳು ಉಪಸ್ಥಿತರಿದ್ದರು.