Samantha : ದುಲ್ಕರ್ ಸಲ್ಮಾನ್ ಮಲಯಾಳಂ ಸಿನಿಮಾದಲ್ಲಿ ಸಮಂತಾ ರೀಪ್ಲೇಸ್..!!
ಟಾಲಿವುಡ್ ಬಹು ಬೇಡಿಕೆಯ ನಟಿ ಸಮಂತಾ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಈ ಖಾಯಿಲೆ ಬಗ್ಗೆ , ಸಮಂತಾ ಆರೋಗ್ಯದ ಬಗ್ಗೆ ಸಾಕಷ್ಟು ಗೊಂದಲಗಳಿದೆ.. ವದಂತಿಗಳೂ ಕೂಡ ಹರಿದಾಡ್ತಿದೆ..
ಈ ನಡುವೆಯೂ ಸಮಂತಾ ಇದೇ ತಿಂಗಳ 11 ರಂದು ರಿಲೀಸ್ ಆದ ಯಶೋಧ ಸಿನಿಮಾದ ಪ್ರಚಾರದಲ್ಲಿ ಭಾಗಿಯಾಗಿದ್ದರು.. ಈ ಸಿನಿಮಾ ಸೂಪರ್ ಸಕ್ಸಸ್ ಕಾಣ್ತಿದೆ..
ಆದ್ರೆ ಸಮಂತಾಗೆ ರೆಸ್ಟ್ ಅಗತ್ಯವಿದೆ.. ಚಿಕಿತ್ಸೆಗೆ ಒಳಗಾಗಬೇಕಿದೆ.. ಹೀಗಾಗಿ ಖುಷಿ ಸಿನಿಮಾದ ಶೂಟಿಂಗ್ ಮುಂದೂಡಿಕೆಯಾಗಿದೆ.. ಇತ್ತ ದುಲ್ಕರ್ ಸಲ್ಮಾನ್ ಜೊತೆಗೆ ಮಾಲಿವುಡ್ ಗೆ ಪದಾರ್ಪಣೆ ಮಾಡಬೇಕಿದ್ದ ಸಮಂತಾ , ಮೊಟ್ಟ ಮೊದಲ ಮಾಲಿವುಡ್ ಸಿನಿಮಾ ಕಿಂಗ್ ಆಫ್ ಕೋತಾದಲ್ಲಿ ನಟಿಸುವುದಿಲ್ಲ ಎನ್ನಲಾಗ್ತಿದೆ..
ವರದಿಯ ಪ್ರಕಾರ, ಕಿಂಗ್ ಆಫ್ ಕೋಥಾದ ತಯಾರಕರು ಆರಂಭದಲ್ಲಿ ಸಮಂತಾ ಅವರೊಂದಿಗೆ ವಿಶೇಷ ಪಾತ್ರಕ್ಕಾಗಿ ಮಾತುಕತೆ ನಡೆಸುತ್ತಿದ್ದರು. ಆದರೆ ಅವರು ಆರೋಗ್ಯ ಸಮಸ್ಯೆಗಳು ಮತ್ತು ಅವರ ಬಿಡುವಿಲ್ಲದ ವೇಳಾಪಟ್ಟಿಯ ಕಾರಣದಿಂದ ಹೊರಗುಳಿದರು. ಈಗ, ಓ ಮೈ ಕಡವುಲೆ ಚಿತ್ರದಲ್ಲಿನ ಪಾತ್ರಕ್ಕೆ ಹೆಸರುವಾಸಿಯಾದ ರಿತಿಕಾ ಸಿಂಗ್ ಅವರ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಇತ್ತೀಚೆಗೆ ಅಭಿಮಾನಿಗಳ ಜೊತೆಗೆ ಚಿತ್ರದ ಸೆಟ್ ಗಳಿಂದ ಸಿಂಗ್ ಅವರ ಫೋಟೋ ಆನ್ ಲೈನ್‌ನಲ್ಲಿ ಕಾಣಿಸಿಕೊಂಡಿತು, ಇದು ವರದಿಗಳನ್ನು ದೃಢಪಡಿಸಿದೆ.
ದುಲ್ಕರ್ ಸಲ್ಮಾನ್ ಈ ಚಿತ್ರದಲ್ಲಿ ದರೋಡೆಕೋರನಾಗಿ ನಟಿಸಲಿದ್ದಾರೆ ಎಂದು ವರದಿಯಾಗಿದೆ.