Nalin kumar kateel – ಪ್ರಧಾನಿಗಳಿಗೆ ಥ್ಯಾಂಕ್ಸ್ ಹೇಳಿ ಟ್ವೀಟ್..!!
ಮಂಗಳೂರು : ವಿವಾದಾತ್ಮಕ ಸುರತ್ಕಲ್ ಟೋಲ್ಗೇಟ್ ಅನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ರದ್ದುಗೊಳಿಸಿದ್ದಾರೆ ಎಂದು ಕರ್ನಾಟಕ ಬಿಜೆಪಿ ಅಧ್ಯಕ್ಷರು ಮತ್ತು ದಕ್ಷಿಣ ಕನ್ನಡ ಸಂಸದರಾದ ನಳಿನ್ ಕುಮಾರ್ ಕಟೀಲ್ ಸೋಮವಾರ ಹೇಳಿದ್ದಾರೆ.
ಟ್ವೀಟ್ ಮಾಡುತ್ತಾ ಪ್ರಧಾನಿ ಮೋದಿ ಹಾಗೂ ನಿತಿನ್ ಗಡ್ಜರಿ ಅವರಿಗೆ ನಳೀನ್ ಕುಮಾರ್ ಕಟೀಲ್ ಅವರು ಧನ್ಯವಾದಗಳನ್ನ ಅರ್ಪಿಸಿದ್ದಾರೆ..
“ಕೇಂದ್ರ ಸಚಿವರು ಈ ಹಿಂದೆ ಟೋಲ್ ರದ್ದುಗೊಳಿಸುವ ಭರವಸೆ ನೀಡಿದ್ದರು, ಆದರೆ ಈಗ ತಾಂತ್ರಿಕ ಅಂಶವನ್ನು ತೆರವುಗೊಳಿಸಲಾಗಿದೆ.” ಎಂದು ಕಟೀಲ್ ಅವರು ತಮ್ಮ ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.








