777 Charlie : ಥೈಲ್ಯಾಂಡ್ ನಲ್ಲೂ ಚಾರ್ಲಿ ಕ್ರೇಜ್..!!
ರಕ್ಷಿತ್ ನಟನೆಯ 777 ಚಾರ್ಲಿ ಸಿನಿಮಾ ಸೂಪರ್ ಸಕ್ಸಸ್ ಕಂಡಿತ್ತು.. ಪ್ಯಾನ್ ಇಂಡಿಯನ್ ಲೆವೆಲ್ ನಲ್ಲಿ ಅಬ್ಬರಿಸಿತ್ತು.. ನಾಯಿ ಮತ್ತು ಮನುಷ್ಯರ ನಡುವಿನ ಬಾಂಧವ್ಯದ ಕುರಿತಾದ ಸಿನಿಮಾ ಇದಾಗಿದ್ದು ಒಟಿಟಿಯಲ್ಲೂ ಅಬ್ಬರಿಸುತ್ತಿದೆ..
ಇದೀಗ ಈ ಸಿನಿಮಾ ಥೈಲ್ಯಾಂಡ್ ನಲ್ಲಿ ರಿಲೀಸ್ ಆಗಲಿದೆ..
ಈ ಬಗ್ಗೆ ಸಿನಿಮಾದ ನಿರ್ದೇಶಕ ಕಿರಣ್ ರಾಜ್ ಅವರು ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ್ದು ,
777 ಚಾರ್ಲಿ ಸಿನಿಮಾ ಥಾಯ್ಲೆಂಡ್ನಲ್ಲಿ ಅಧಿಕೃತವಾಗಿ ಬಿಡುಗಡೆಯಾಗುತ್ತಿದೆ . ಈ ನಿಟ್ಟಿನಲ್ಲಿ ಸಿನಿಮಾದ ಟ್ರೈಲರ್ನ್ನು ಥಾಯ್ ಭಾಷೆಯಲ್ಲಿ ಬಿಡುಗಡೆ ಮಾಡಲಾಗಿದೆ. ಎಲ್ಲರೂ ಪ್ರೀತಿ ತೋರಿಸಿ ಬೆಂಬಲಿಸಿ ಎಂದು ತಿಳಿಸಿದ್ದಾರೆ.