Zomato: ಫುಡ್ ಆರ್ಡರ್ ಅಪ್ಲಿಕೇಶನ್ ಜೊಮ್ಯಾಟೊದಲ್ಲೂ ಉದ್ಯೋಗ ಕಡಿತ
ಫುಡ್ ಆರ್ಡರ್ ಮಾಡುವ ಅಪ್ಲಿಕೇಶನ್ ಜೊಮ್ಯಾಟೊ ಸಂಸ್ಥೆಯು ಸುಮಾರು 3% ಸಿಬ್ಬಂದಿಯನ್ನು ವಜಾಗೊಳಿಸಲು ನಿರ್ಧರಿಸಿದೆ. ಫೇಸ್‌ಬುಕ್ ಮಾತೃಸಂಸ್ಥೆ ಮೆಟಾ, ಟ್ವಿಟರ್, ಅಮೆಜಾನ್ ಮುಂತಾದ ಕಂಪನಿಗಳು ತಮ್ಮ ಕೆಲವು ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದ ನಂತರ ಜೊಮ್ಯಾಟೊದಲ್ಲೂ ಉದ್ಯೋಗ ಕಡಿತಗೊಳಿಸಲಾಗಿದೆ.
ನಿಯಮಿತ ಕಾರ್ಯಕ್ಷಮತೆ ಆಧಾರಿತ ವಜಾಗೊಳಿಸುವಿಕೆಯ ಭಾಗವಾಗಿ ಇವರನ್ನು ಕೆಲಸದಿಂದ ಬಿಡುಗಡೆ ಮಾಡಲಾಗುವುದು ಎಂದು ಜೊಮ್ಯಾಟೊ ಸಂಸ್ಥೆಯ ವಕ್ತಾರರು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.
ಇದರಿಂದಾಗಿ ವಿವಿಧ ವಲಯಗಳಲ್ಲಿ ಕಾರ್ಯಚರಿಸುತ್ತಿರುವ ಕನಿಷ್ಠ 100 ಉದ್ಯೋಗಿಗಳು ಕೆಲಸದಿಂದ ವಜಾಗೊಳ್ಳಲಿದ್ದಾರೆ ಎಂದು ಹೇಳಲಾಗಿದೆ. ಕಳೆದ ಎರಡು ವಾರಗಳಿಂದ ಉದ್ಯೋಗಿಗಳನ್ನು ಮನೆಗೆ ಕಳುಹಿಸುವ ಪ್ರಕ್ರಿಯೆಯು ನಡೆಯುತ್ತಿದೆ ಎಂದು ವರದಿಗಳು ತಿಳಿಸಿದೆ.