Shraddha murder case: ಶ್ರದ್ಧಾ ಕೊಲೆ ಪ್ರಕರಣ – ತಲೆಯ ಶೋಧಕ್ಕಾಗಿ ಕೆರೆಯ ನೀರು ಖಾಲಿ
ಶ್ರದ್ಧಾ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ದೆಹಲಿ ಪೊಲೀಸರು ಶ್ರದ್ಧಾ ತಲೆಗಾಗಿ ಶೋಧ ಮುಂದುವರಿಸಿದ್ದಾರೆ. ಹಂತಹ ಆಫ್ತಾಬ್ ಶ್ರದ್ಧಾ ತಲೆಯನ್ನು ಮೆಹ್ರೌಲಿ ಕೆರೆಯಲ್ಲಿ ಎಸೆದಿರುವುದಾಗಿ ಪೊಲೀಸರಿಗೆ ತಿಳಿಸಿದ್ದು, ಇದೀಗ ಕೆರೆಯ ನೀರನ್ನೇ ಖಾಲಿ ಮಾಡಿಸಲಾಗುತ್ತಿದೆ. ದೆಹಲಿ ಮುನ್ಸಿಪಲ್ ಕಾರ್ಪೊರೇಶನ್ ಸಿಬ್ಬಂದಿ ಮೆಹ್ರೌಲಿ ಕೆರೆಯ ನೀರನ್ನು ಹೊರಗೆ ಹಾಕುವ ಕಾರ್ಯದಲ್ಲಿ ತೊಡಗಿದ್ದಾರೆ.
ದೆಹಲಿ ಪೊಲೀಸರು ಅಫ್ತಾಬ್‌ನೊಂದಿಗೆ ಮೆಹ್ರೌಲಿ ಅರಣ್ಯ ಪ್ರದೇಶದಲ್ಲಿ ಶೋಧ ನಡೆಸುತ್ತಿದ್ದು, ಮೃತದೇಹದ ಸಂಪೂರ್ಣ ಭಾಗಗಳನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದಾರೆ.

ಅಫ್ತಾಬ್ ವಿಚಾರಣೆ ವೇಳೆ ಕೆಲವೊಮ್ಮೆ ಸುಳ್ಳು ಮತ್ತೆ ಕೆಲವು ಬಾರಿ ಸತ್ಯ ಹೇಳುತ್ತಿದ್ದು, ಇಂದು ಆತನಿಗೆ ಮಂಪರು ಪರೀಕ್ಷೆ ನಡೆಯಲಿದೆ. ಎಲ್ಲರ ಗಮನ ಆತನ ಮಂಪರು ಪರೀಕ್ಷೆ ಮೇಲೆ ನೆಟ್ಟಿದ್ದು, ಏನೆಲ್ಲಾ ಸತ್ಯ ಬಾಯಿ ಬಿಡುತ್ತಾನೆ ಅನ್ನೊ ಕುತೂಹಲ ಕೆರಳಿಸಿದೆ.
ಮಂಪರು ಪರೀಕ್ಷೆಯಲ್ಲಿ ಸೋಡಿಯಂ ಪೆಂಟೊಥಾಲ್ ಎಂಬ ಔಷಧಿಯನ್ನು ಆರೋಪಿಯ ದೇಹಕ್ಕೆ ಚುಚ್ಚಲಾಗುತ್ತದೆ. ಇದರಿಂದ ಆರೋಪಿಯು ಸಂಮೋಹನ ಸ್ಥಿತಿಯಲ್ಲಿರುತ್ತಾನೆ ಮತ್ತು ಸುಳ್ಳು ಹೇಳಲು ಅಸಮರ್ಥನಾಗಿರುತ್ತಾನೆ ಎಂದು ಹೇಳಲಾಗಿದೆ.
Shraddha murder case: Shraddha murder case – Lake water empty for head search








