ಡಿಜಿಟಲ್ ಮಾಧ್ಯಮಗಳ ನಿಯಂತ್ರಣಕ್ಕೆ ಶೀಘ್ರದಲ್ಲಿಯೇ ಹೊಸ ಕಾನೂನು – ಅನುರಾಗ್ ಠಾಕೂರ್…
ಡಿಜಿಟಲ್ ಮಾಧ್ಯಮಗಳ ನಿಯಂತ್ರಣಕ್ಕೆ ಶೀಘ್ರದಲ್ಲಿಯೇ ಹೊಸ ಕಾನೂನು ತರಲಾಗುವುದು ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.
ಹಿಂದೆ ಸುದ್ದಿಗಳ ಏಕಮುಖ ಸಂವಹನವಿತ್ತು, ಆದರೆ ವಿದ್ಯುನ್ಮಾನ ಮತ್ತು ಡಿಜಿಟಲ್ ಮಾಧ್ಯಮಗಳ ಬೆಳವಣಿಗೆಯೊಂದಿಗೆ, ಸುದ್ದಿ ಸಂವಹನವು ಬಹು ಆಯಾಮವಾಗಿದೆ. ಈಗ ಒಂದು ಹಳ್ಳಿಯ ಸಣ್ಣ ಸುದ್ದಿಯೂ ಡಿಜಿಟಲ್ ಮಾಧ್ಯಮದ ಮೂಲಕ ರಾಷ್ಟ್ರೀಯ ವೇದಿಕೆಗೆ ತಲುಪುತ್ತದೆ ಎಂದು ಅವರು ಬುಧವಾರ ಹೇಳಿದರು.
ಸರ್ಕಾರ ಮುದ್ರಣ, ಎಲೆಕ್ಟ್ರಾನಿಕ್ ಮತ್ತು ಡಿಜಿಟಲ್ ಮಾಧ್ಯಮಗಳನ್ನ ಸ್ವಯಂ ನಿಯಂತ್ರಣಕ್ಕೆ ಬಿಟ್ಟಿದೆ ಎಂದು ಠಾಕೂರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
“ಡಿಜಿಟಲ್ ಮಾಧ್ಯಮ ಅವಕಾಶಗಳನ್ನ ಮತ್ತು ಸವಾಲುಗಳನ್ನು ಒದಗಿಸುತ್ತದೆ. ಉತ್ತಮ ಸಮತೋಲನ ಹೊಂದಲು ಈ ಬಗ್ಗೆ ಏನು ಮಾಡಬೇಕೆಂದು ಸರ್ಕಾರವು ನೋಡುತ್ತದೆ. ನಿಮ್ಮ ಕೆಲಸವನ್ನ ಸರಳಗೊಳಿಸಲು ನಾವು ಮಸೂದೆಯನ್ನ ಪರಿಚಯಿಸುತ್ತಿದ್ದೇವೆ ಎಂದು ಅನುರಾಗ್ ಠಾಕೂರ್ ಹೇಳಿದ್ದಾರೆ.
ಪತ್ರಿಕೆಗಳ ನೋಂದಣಿ ಪ್ರಕ್ರಿಯೆಯನ್ನು ಸರಳಗೊಳಿಸಲು ಕೇಂದ್ರ ಸರ್ಕಾರವು 1867 ರ ಪ್ರೆಸ್ ಮತ್ತು ರಿಜಿಸ್ಟ್ರೇಶನ್ ಆಕ್ಟ್ ಬದಲಿಗೆ ಹೊಸ ಕಾನೂನನ್ನು ಶೀಘ್ರದಲ್ಲೇ ತರಲಿದೆ ಎಂದು ಠಾಕೂರ್ ಹೇಳಿದರು. ಹೊಸ ಕಾನೂನಿನ ಅಡಿಯಲ್ಲಿ, ಆನ್‌ಲೈನ್ ಮೋಡ್ ಮೂಲಕ ಒಂದು ವಾರದಲ್ಲಿ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸ ಬಹುದು. ಇದು ಈಗ ಸುಮಾರು ನಾಲ್ಕು ತಿಂಗಳುಗಳನ್ನ ತೆಗೆದುಕೊಳ್ಳುತ್ತದೆ.
Digital media: New law to control digital media soon – Anurag Thakur…








