Fifa Worldcup : 36 ವರ್ಷಗಳ ಬಳಿಕ ವಿಶ್ವಕಪ್ ಗೆ ಮರಳಿದ್ದ ಕೆನಡಾಗೆ ಸೋಲುಣಿಸಿದ ಬೆಲ್ಜಿಯಂ..!!
ಕತಾರ್ ನ ಖಲೀಫಾ ಮೈದಾನದಲ್ಲಿ ವರ್ಣರಂಜಿತ Fifa Worldcup ಜಾತ್ರೆ ನಡೆಯುತ್ತಿದೆ.. ವಿಶ್ವಾದ್ಯಂತ ಫಿಫಾ ಫೀವರ್ ಇದೆ.. ಅಂದ್ಹಾಗೆ 36 ವರ್ಷಗಳ ಬಳಿಕ ಕನಡಾ ಫುಟ್ ಬಾಲ್ ತಂಡ ವಿಶ್ವಕಪ್ ಗೆ ಮರಳಿತ್ತು.. ಆದ್ರೆ ಕೆನಡಾವನ್ನ ಬಲಿಷ್ಠ ಬೆಲ್ಜಿಯಂ ಸೋಲಿಸಿದ್ದು , ಕೆನಡಾಗೆ ನಿರಾಸೆಯಾಗಿದೆ.. 1-0 ಗೋಲಿನಿಂದ ಬೆಲ್ಜಿಯಂ ತಂಡ ಗೆದ್ದು ಬೀಗಿದೆ..
44ನೇ ನಿಮಿಷದಲ್ಲಿ ಮೈಕಿ ಬಾಟ್ಸ್ಶುಯಿ ಗೋಲು ಹೊಡೆದು ತಂಡಕ್ಕೆ ಮುನ್ನಡೆ ನೀಡಿದರು. ಅಹಮದ್ ಅಲ್ ಬಿನ್ ಮೈದಾನದಲ್ಲಿ ಕನಡಾ ತಂಡ ಗೋಲು ಹೊಡೆಯದಿದ್ದರೂ ಫಿಫಾ 2ನೇ ರಾಂಕ ಶ್ರೇಯಾಂಕಿ ತಂಡ ಬೆಲ್ಜಿಯಂಗೆ ಭಾರೀ ಸವಾಲನ್ನು ನೀಡಿದರು. ಕೆನಡಾ ತಂಡದ ತಾರಾ ಆಟಗಾರ ಅಲೊನ್ಸಾ ಡೇವಿಸ್ ಹೊಡೆದ ಪೆನಾಲ್ಟಿ ಚೆಂಡನ್ನು ಥಿಬೌಟ್ ಕೋರ್ಟೊಸ್ ತಡೆದರು.
ಕೆನಡಾ ತಂಡ ಗೋಲ್ ಪೋಸ್ಟ್ ಬಳಿ 21 ಹೊಡೆತಗಳನ್ನು ಹೊಡೆದರೆ ಬೆಲ್ಜಿಯಂ 9 ಶಾಟ್ಗಳನ್ನು ಹೊಡೆಯಿತು.
ಕೆನಡಾ ತಂಡ ಇನ್ನಷ್ಟೆ ಅಂಕಪಟ್ಟಿಯಲ್ಲಿ ಅಂಕ ಗಳಿಸಬೇಕಿದೆ. ಇನ್ನುಳಿದ ಪಂದ್ಯಗಳಲ್ಲಿ ಒಂದೂ ಗೋಲಾನ್ನಾದರೂ ಬಾರಿಸ್ತುತಾ ಅನ್ನೋದನ್ನು ಕಾದು ನೋಡಬೇಕಿದೆ.