Highcourt: ಕೋರ್ಟ್ ಗಳು ಕಸದ ತೊಟ್ಟಿಯಲ್ಲ- ರಾಜ್ಯ ಸರ್ಕಾರದ ಮೇಲೆ ಹೈಕೋರ್ಟ್ ಗರಂ
ನ್ಯಾಯಾಲಯಗಳಲ್ಲಿ ಅನಗತ್ಯ ಮತ್ತು ಕ್ಷುಲ್ಲಕ ಮೊಕದ್ದಮೆಗಳನ್ನು ಹೂಡಿ ವ್ಯಾಜ್ಯಗಳ ಸ್ಫೋಟಕ್ಕೆ ಕಾರಣವಾಗುತ್ತಿದೆ ಎಂದು ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಇನ್ನು ಮುಂದೆ ಅನಗತ್ಯ ದಾವೆಗಳನ್ನು ನಿಯಂತ್ರಿಸದಿದ್ದರೆ, ಭಾರೀ ದಂಡ ವಿಧಿಸುವುದಾಗಿ ಸರ್ಕಾರಕ್ಕೆ ಎಚ್ಚರಿಕೆಯನ್ನೂ ನೀಡಿದೆ.
ನ್ಯಾಯಾಲಯವು ಕರ್ನಾಟಕ ರಾಜ್ಯಸರ್ಕಾರಕ್ಕೆ, ಕಾನೂನು ಇಲಾಖೆಯು ರೂಪಿಸಿರುವ ವ್ಯಾಜ್ಯ ಪರಿಹಾರ ನೀತಿ 2021 ಅನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಮತ್ತು ಅನಗತ್ಯ ಅರ್ಜಿಗಳು, ಮೇಲ್ಮನವಿಗಳು ಇತ್ಯಾದಿಗಳನ್ನು ಭರ್ತಿ ಮಾಡುವುದನ್ನು ತಪ್ಪಿಸಲು ವ್ಯಾಜ್ಯ ಪರಿಹಾರ ನೀತಿಯ ಬಗ್ಗೆ ಅಧಿಕಾರಿಗಳಿಗೆ ಜಾಗೃತಿ ಮೂಡಿಸಲು ಕಾರ್ಯಾಗಾರಗಳನ್ನು ನಡೆಸುವಂತೆ ಸೂಚಿಸಿದೆ.
ಅನಗತ್ಯ ಮೊಕದ್ದಮೆಗಳ ಬಗ್ಗೆ ಬೇಸರ ವ್ಯಕ್ತಪಡಿಸಿರುವ ನ್ಯಾಯ ಪೀಠವು, ಇದು ಅಮೂಲ್ಯವಾದ ನ್ಯಾಯಾಂಗದ ಸಮಯವನ್ನು ಹಾಳು ಮಾಡುತ್ತಿದೆ ಎಂದು ಹೇಳಿದೆ.
ಕೋರ್ಟ್ ಗಳನ್ನು ಕಸದ ತೊಟ್ಟಿಯಂತೆ ಪರಿಗಣಿಸಬೇಡಿ ಎಂದು ಎಚ್ಚರಿಕೆ ನೀಡಿದ ಕರ್ನಾಟಕ ಹೈಕೋರ್ಟ್, ಇನ್ನು ಮುಂದೆ ಯಾರು ಆ ರೀತಿ ಕೇಸ್ ಹಾಕುತ್ತಾರೋ ಅಂತಹ ಅಧಿಕಾರಿಯಿಂದಲೇ ದಂಡ ವಸೂಲಿ ಮಾಡಲಾಗುವುದು ಎಂದು ಹೇಳಿದೆ.
Highcourt: Courts are not dustbins- High Court is heavy on state government