E-court: ಸಂವಿಧಾನ ದಿನದ ಅಂಗವಾಗಿ ಇಂದು ಇ- ಕೋರ್ಟ್ ಗೆ ಚಾಲನೆ
ಪ್ರಧಾನಿ ಮೋದಿ ಇಂದು ಸಂವಿಧಾನ ದಿನದ ಅಂಗವಾಗಿ ಇ- ಕೋರ್ಟ್ ಗೆ ಚಾಲನೆ ನೀಡಲಿದ್ದಾರೆ. ಅರ್ಜಿದಾರರು, ವಕೀಲರು, ನ್ಯಾಯಾಂಗ ಅಧಿಕಾರಿಗಳು, ನ್ಯಾಯಾಧೀಶರಿಗೆ ತಂತ್ರಜ್ಞಾನ ಆಧಾರಿತ ಸೇವೆ ನೀಡುವ ಸಲುವಾಗಿ ಇ- ಕೋರ್ಟ್ ರೂಪಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಸುಪ್ರೀಂ ಕೋರ್ಟ್‌ನಲ್ಲಿ ನಡೆಯುವ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಇ-ಕೋರ್ಟ್ ಯೋಜನೆಯಡಿಯಲ್ಲಿ ಹೊಸ ಉಪಕ್ರಮಗಳಿಗೂ ಚಾಲನೆ ನೀಡಲಿದ್ದಾರೆ.
ಈ ಯೋಜನೆಯಡಿ ‘ವರ್ಚುವಲ್ ಜಸ್ಟೀಸ್ ಕ್ಲಾಕ್’, ‘ಜಸ್ಟಿಸ್’ ಮೊಬೈಲ್ ಅಪ್ಲಿಕೇಶನ್ 2.0′ , ‘ಡಿಜಿಟಲ್ ಕೋರ್ಟ್’ ಮತ್ತು ‘ಎಸ್3ವಾಎಸ್’ ವೆಬ್‌ಸೈಟ್ ಗೆ ಸಹ ಚಾಲನೆ ನೀಡಲಿದ್ದಾರೆ.
ಈ ಮೂಲಕ ಎಷ್ಟು ಪ್ರಕರಣಗಳು ಇತ್ಯರ್ಥಗೊಂಡಿದೆ, ಎಷ್ಟು ಪ್ರಕರಣಗಳು ಬಾಕಿ ಇದೆ ಇತ್ಯಾದಿ ಮಾಹಿತಿಗಳು ಸುಲಭವಾಗಿ ಸಿಗಲಿದೆ.
E-court: Launch of e-court today as part of Constitution Day