Home guard : ನೋಟಿಸ್ ನೀಡದೆ ಹೋಮ್ ಗಾರ್ಡ್ ಸಸ್ಪೆಂಡ್ ತಪ್ಪಲ್ಲ – ಹೈಕೋರ್ಟ್
ಪೊಲೀಸ್ ಇಲಾಖೆಯ ಅಧೀನದಲ್ಲಿ ಕಾರ್ಯ ನಿರ್ವಹಿಸುವ ಗೃಹ ರಕ್ಷಕ ದಳದ (ಹೋಮ್ ಗಾರ್ಡ್) ಸಿಬ್ಬಂದಿಯ ವಿರುದ್ಧ ಆರೋಪ ಕೇಳಿ ಬಂದಾಗ ನೋಟಿಸ್ ನೀಡದೆಯೂ ಅಮಾನತು ಆದೇಶ ಹೊರಡಿಸಬಹುದು ಎಂದು ಹೈಕೋರ್ಟ್ (Highcourt)ತಿಳಿಸಿದೆ.
ಇತ್ತೀಚೆಗೆ ಬೆಂಗಳೂರಿನ (bangalore) ಲಗ್ಗೆರೆಯ ಡಿ.ಇ ಕೆಂಪಾಮಣಿ ಎಂಬುವರನ್ನು ನೋಟಿಸ್ ನೀಡದೇ ಅಮಾನತುಗೊಳಿಸಲಾಗಿತ್ತು. ಈ ಆದೇಶ ರದ್ದು ಕೋರಿ ಗೃಹರಕ್ಷಕ ದಳದ ಸಿಬ್ಬಂದಿಯೊಬ್ಬರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಎಸ್.ಜಿ ಪಂಡಿತ್ ಅವರಿದ್ದ ಏಕಸದಸ್ಯಪೀಠ ಗೃಹ ರಕ್ಷಕ ದಳಕ್ಕೆ ಸಂಬಂಧಿಸಿ ಮಹತ್ವದ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.
ಗೃಹ ರಕ್ಷಕ ದಳದ ಸಿಬ್ಬಂದಿಯ ವಿರುದ್ಧ ಆರೋಪ ಕೇಳಿ ಬಂದಾಗ ಪೂರ್ವಭಾವಿ ನೋಟಿಸ್ ನೀಡದೆ ಅಮಾನತು ಮಾಡಬಹುದು ಎಂದು ಹೈಕೋರ್ಟ್ ತಿಳಿಸಿದೆ.
ಗೃಹ ರಕ್ಷಕ ದಳ ಶಿಸ್ತಿಗೆ ಹೆಸರಾದದ್ದು, ಅಂತಹ ಪಡೆಯ ಸಿಬ್ಬಂದಿಯ ಅಶಿಸ್ತನ್ನು ಸಹಿಸಲಾಗದು. ಗೃಹ ರಕ್ಷಕರ ಅಮಾನತು ಎನ್ನುವುದು ಶಿಕ್ಷೆಯಲ್ಲ, ಅದೊಂದು ತಾತ್ಕಾಲಿಕ ಕ್ರಮ. ಅಮಾನತು ಆಗಿರುವ ಸಿಬ್ಬಂದಿ ತನಿಖೆ ಎದುರಿಸಬೇಕಾಗುತ್ತದೆ. ಹಾಗಾಗಿ ಡಿಜಿಪಿ ಹೊರಡಿಸಿರುವ ಅಮಾನತು ಆದೇಶವನ್ನು ಕೋರ್ಟ್ ರದ್ದು ಮಾಡುವುದಿಲ್ಲ ಎಂದು ಪೀಠ ತಿಳಿಸಿದೆ.
home-guard-suspension-of-home-guard-without-giving-notice-is-not-wrong-high-court