ದೇಶದಾದ್ಯಂತ ಮಹಾಮಾರಿ ಕೊರೊನಾ ವೈರಸ್ ಸೋಂಕಿನ ಆರ್ಭಟ ಜೋರಾಗಿದ್ದು, ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಜನರು ಕೂಡ ಹೆಮ್ಮಾರಿಯಿಂದ ತಪ್ಪಿಸಿಕೊಳ್ಳಲು ನಾನಾ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಲಾಕ್ ಡೌನ್ ಸಡಿಲಿಕೆ ಬಳಿಕ ಜನರು ರಸ್ತೆಗಿಳಿದಿದ್ದು, ಮಾಸ್ಕ್ ಗಳನ್ನು ಧರಿಸಿ ಓಡಾಡುತ್ತಿದ್ದಾರೆ. ಕೆಲವರು ಡಿಫರೆಂಟ್ ಡಿಸೈನ್ ಮಾಸ್ಕ್ ಗಳನ್ನು ವೇರ್ ಮಾಡುತ್ತಿದ್ದಾರೆ. ಹೀಗೆ ಕಲರ್ ಫುಲ್ ಡಿಫರೆಂಟ್ ಮಾಸ್ಕ್ ಗಳನ್ನು ಧರಿಸುವವರಿಗಾಗಿ ಇದೀಗ ಮಾರ್ಕೆಟ್ ಗೆ ಉಪ್ಪಿ ಮಾಸ್ಕ್ ಎಂಟ್ರಿ ಕೊಟ್ಟಿದೆ.
ಹೌದು..! ಸಿನಿಮಾ ತಾರೆಯರು ತಮ್ಮ ಅಭಿಮಾನಿಗಳಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಕಿಲ್ಲರ್ ಕೊರೊನಾ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಅದರಂತೆ ಈಗ ರಿಯಲ್ ಸ್ಟಾರ್ ಉಪೇಂದ್ರ ಅವರ ಹೈದರಾಬಾದ್ ಫ್ಯಾನ್ಸ್, ಉಪ್ಪಿ ಫೋಟೋ ಇರುವ ಮಾಸ್ಕ್ ಗಳನ್ನು ಸಿದ್ಧಪಡಿಸಿ ಮಾರ್ಕೆಟ್ ಗೆ ಬಿಟ್ಟಿದ್ದಾರೆ. ಈ ಮೂಲಕ ಹೆಮ್ಮಾರಿ ವೈರಸ್ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಉಪ್ಪಿ ಈ ಸ್ಪೆಷಲ್ ಮಾಸ್ಕ್ ಗಳನ್ನ ತಮ್ಮ ಫ್ಯಾನ್ಸ್ ಗೂ ವಿತರಿಸಿದ್ದಾರೆ. ನಿಮ್ಮ ಕ್ಷೇಮಕ್ಕಾಗಿ ಮನೆಯಲ್ಲೇ ಸೇಫಾಗಿರಿ ಅಂತ ಮಾಸ್ಕ್ ಮೇಲೆ ಬರೆಯಲಾಗಿದೆ.








