FIFA World Cup ಪ್ರದರ್ಶನದ ವೇಳೆ ಧ್ವಜವನ್ನ ತಲೆಕೆಳಗಾಗಿ ಹಿಡಿದ ನೂರಾ ಫತೇಯಿ..
ಕತಾರ್ ನಲ್ಲಿ ನಡೆಯುತ್ತಿರುವ ಫೀಫಾ ವಿಶ್ವಕಪ್ 2022 ಪ್ಯಾನ್ ಫೆಸ್ಟ್ ಸಮಾರಂಭದಲ್ಲಿ ನಟಿ ನೂರಾ ಫತೇಯಿ ಬಾಲಿವುಡ್ ಹಾಡುಗಳಿಗೆ ಡ್ಯಾನ್ಸ್ ಮಾಡಿ ಅಭಿಮಾನಿಗಳನ್ನ ರಂಜಿಸಿದರು.
ಇದೇ ವೇಳೆ ಭಾರತದ ಧ್ವಜವನ್ನ ಹಿಡಿದು ವೇದಿಕೆ ಮೇಲೆ ಹೆಮ್ಮೆಯಿಂದ ಪ್ರದರ್ಶಿಸುವ ವೇಳೆ ನಟಿ ನೂರ ಫತೇಯಿ ಎಡವಟ್ಟು ಮಾಡಿಕೊಂಡಿದ್ದಾರೆ. ಭಾರತದ ಧ್ವಜವನ್ನ ತಲೆಕೆಳಗಾಗಿ ಹಿಡಿದು ಪ್ರದರ್ಶಿಸಿದ್ದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗುತ್ತಿದ್ದಾರೆ.
Shame on you #NoraFatehi for disrespecting our national flag, Tiranga🇮🇳. At #FIFAWorldCup event!
Totally intolerable. Absolutely condemnable, and actionable act. pic.twitter.com/0z921AE4KP
— Dr. Syed Rizwan Ahmed (@Dr_RizwanAhmed) December 2, 2022
ದೋಹಾದ ಅಲ್ ಬಿದ್ದಾ ಪಾರ್ಕ್‌ನಲ್ಲಿ ಆಯೋಜಿಸಲಾಗಿದ್ದ ಫೆಸ್ಟ್ ನಲ್ಲಿ ಬೆಳ್ಳಿಯ ಕಲರ್ ಉಡುಪು ಧರಿಸಿದ್ದ ನಟಿ ನೂರ ಫತೇಯಿ ಭಾರತದ ಧ್ವಜವನ್ನ ಹಿಡಿದು “ನಾನು ಜೈಹಿಂದ್ ಎಂದು ಕೇಳಬಹುದು ಎಂದಾಗ ನೆರದಿದ್ದ ಸಭಿಕರೆಲ್ಲರೂ ಜೈಹಿಂದ ಎಂದು ಘೋಷಣೆ ಕೂಗಿದರು. ಈ ಸಂಭ್ರದಲ್ಲಿ ನಟಿ ಬಾವುಟ ಹಿಡಿಯುವ ರೀತಿಯನ್ನ ಮರೆತುಬಿಟ್ಟಿದ್ದಾರೆ.
ನೂರ ಫತೇಯಿ FIFA ವಿಶ್ವಕಪ್ 2022 ನಲ್ಲಿ ತಮ್ಮ ಲೈಟ್ ದಿ ಸ್ಕೈ ಗೀತೆಗೆ ಗ್ರೂಪ್ ಡ್ಯಾನ್ಸ್ ಮಾಡಿದ್ದರು. Noora Fateh held the flag upside down during the FIFA World Cup performance..








