ಮುಂದಿನ ದಿನಗಳಲ್ಲಿ ಕಲ್ಲಿದ್ದಲು ಬೇಡಿಕೆ ತೀವ್ರಗೊಳ್ಳಲಿದೆ – ಸಚಿವ ಪ್ರಲ್ಹಾದ್ ಜೋಶಿ….
ಬೆಂಗಳೂರು : ಸ್ವಾತಂತ್ರ್ಯೋತ್ಸವದ ಶತಮಾನೋತ್ಸವದ ವೇಳೆಗೆ ಭಾರತ 30 ಟ್ರಿಲಿಯನ್ ಆರ್ಥಿಕತೆ ಹೊಂದಲಿದ್ದು, ಆ ವೇಳೆಗೆ ವಿದ್ಯುತ್ ಬೇಡಿಕೆ ಹೆಚ್ಚಾಗಲಿದ್ದು, ಸಹಜವಾಗಿ ಕಲ್ಲಿದಲು ಬೇಡಿಕೆ ಸಹ ತೀವ್ರಗೊಳ್ಳಲಿದೆ ಎಂದು ಕೇಂದ್ರ ಗಣಿ, ಕಲ್ಲಿದ್ದಲು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಬೆಂಗಳೂರಿನಲ್ಲಿ ಹೇಳಿದರು.
ನಗರದಲ್ಲಿಂದು ನಡೆದ ವಾಣಿಜ್ಯ ಕಲ್ಲಿದ್ದಲು ಬ್ಲಾಕ್ ಹರಾಜು ಹಾಗೂ ಗಣಿಗಾರಿಕೆ ಹೂಡಿಕೆದಾರರ ಸಮಾವೇಶ ನಡೆಯಿತು. ಕೇಂದ್ರ ಗಣಿ, ಕಲ್ಲಿದ್ದಲು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯ ಗಣಿ ಮತ್ತು ಭೂ-ವಿಜ್ಞಾನ ಸಚಿವ ಆಚಾರ್ ಹಾಲಪ್ಪ ಸೇರಿದಂತೆ ಮತ್ತಿತರರು ಸಮಾವೇಶದಲ್ಲಿ ಉಪಸ್ಥಿತರಿದ್ದರು.
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಾತನಾಡಿ “ಸ್ವಾತಂತ್ರ್ಯೋತ್ಸವದ ಶತಮಾನೋತ್ಸವದ ವೇಳೆಗೆ ಭಾರತ 30 ಟ್ರಿಲಿಯನ್ ಆರ್ಥಿಕತೆ ಹೊಂದಲಿದೆ. ಆ ವೇಳೆಗೆ ವಿದ್ಯುತ್ ಬೇಡಿಕೆ ಹೆಚ್ಚಾಗಲಿದ್ದು, ಸಹಜವಾಗಿ ಕಲ್ಲಿದಲು ಬೇಡಿಕೆ ಸಹ ತೀವ್ರಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಕಲ್ಲಿದ್ದಲು ಕ್ಷೇತ್ರದ ಮೇಲಿನ ಹೂಡಿಕೆಗೆ ವ್ಯಾಪಕ ಅವಕಾಶಗಳಿವೆ. ರಾಜ್ಯದಲ್ಲಿ 7 ಕಲ್ಲಿದ್ದಲು ಬ್ಲಾಕ್ ಗಳ ಹರಾಜು ಪ್ರಕ್ರಿಯೆ ನಡೆಯುತ್ತಿದೆ. 6ನೇ ಕಂತಿನ 141 ಬ್ಲಾಕ್ ಗಳು ಹರಾಜಿಗೆ ಸಿದ್ಧವಾಗಿದ್ದು, ಒಟ್ಟಾರೆ ಜಿಡಿಪಿಗೆ ಗಣಿಗಾರಿಕೆಯ ಪಾಲು ಶೇಕಡ 2.5ರಷ್ಟು ಹೆಚ್ಚಾಗಲಿದೆ ಎಂದು ಹೇಳಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮುಂದಿನ ನಾಲ್ಕೈದು ವರ್ಷದಲ್ಲಿ ಕರ್ನಾಟಕ ವಿಶ್ವದ ಅತಿದೊಡ್ಡ ಕಬ್ಬಿಣದ ಅದಿರುವ ಉತ್ಪಾದನೆ ರಾಜ್ಯವಾಗಲಿದೆ. ಈಗಾಗಲೇ ಅತಿ ದೊಡ್ಡ ಕಬ್ಬಿಣದ ಕಾರ್ಖಾನೆ ಹೊಂದಿದೆ ಎಂದರು. ಕೋಲಾರ ಚಿನ್ನದ ಗಣಿ ಮರು ಆರಂಭಿಸಲು ಅನೇಕ ಕಂಪನಿಗಳು ಆಸಕ್ತಿ ತೋರಿಸಿವೆ. ನಿಯಮಾವಳಿಗಳನ್ನು ಸರಳೀಕರಣಗೊಳಿಸಿ ಗಣಿ ಉದ್ಯಮಕ್ಕೆ ಸರ್ಕಾರ ಬೆಂಬಲ ನೀಡಲಿದೆ ಎಂದು ಹೇಳಿದರು.
pralhad joshi : Coal demand will intensify in coming days – Minister Pralhad Joshi