IND VS BNG : ಇಂದಿನಿಂದ ಭಾರತ-ಬಾಂಗ್ಲಾ ಏಕದಿನ ಮ್ಯಾಚ್
ಇಂದಿನಿಂದ ಭಾರತ – ಬಾಂಗ್ಲಾದೇಶ ನಡುವಿನ ಸರಣಿ ಆರಂಭವಾಗಲಿದ್ದು ಮೊದಲ ಏಕದಿನ ಪಂದ್ಯ ಇಂದು ಮೀರ್ಪುರ್ನಲ್ಲಿ ನಡೆಯಲಿದೆ.
ಮುಂದಿನ ವರ್ಷ ಏಕದಿನ ವಿಶ್ವಕಪ್ ದೃಷ್ಟಿಯಲ್ಲಿಟ್ಟುಕೊಂಡು ಏಕದಿನ ಕ್ರಿಕೆಟ್ ಮೇಲೆ ಭಾರತ ತಂಡದ ಗಮನ ನೀಡಲಿದೆ. ಟಿ20 ಆವೃತ್ತಿಯಲ್ಲಿ ಬದಲಾವಣೆ ಮಾಡಿದಂತೆ ಏಕದಿನ ಆವೃತ್ತಿಯಲ್ಲೂ ಬದಲಾವಣೆ ಆಗಬೇಕಿದೆ.
ಏಕದಿನ ಆವೃತ್ತಿಗೆ ಸೂಕ್ತ ಆಟಗಾರರರು ಬೇಕಾಗಿದ್ದಾರೆ. ಆರಂಭಿಕ ಸ್ಥಾನಕ್ಕೆ ಶಿಖರ್ ಧವನ್ ಮತ್ತು ಕೆ.ಎಲ್.ರಾಹುಲ್ ನಡುವೆ ಪೈಪೋಟಿ ಇದೆ. ಶುಭಮನ್ ಗಿಲ್ ಕೂಡ ರೇಸ್ನಲ್ಲಿದ್ದಾರೆ.
ಮಧ್ಯಮ ಕ್ರಮಾಂಕದಲ್ಲಿ 3ನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ನಾಲ್ಕನೆ ಕ್ರಮಾಂಕಕ್ಕೆ ಶ್ರೇಯಸ್ ಅಯ್ಯರ್ ಸೂಕ್ತ ಬ್ಯಾಟರ್ ಅನ್ನೋದನ್ನು ನಿರೂಪಿಸುತ್ತಿದ್ದಾರೆ. 5ನೇ ಕ್ರಮಾಂಕಕ್ಕೆ ರಿಷಬ್ ಪಂತ್ ಮತ್ತು ಇಶಾನ್ ಕೀಶನ್ ಪೈಪೋಟಿ ನಡೆಸಲಿದ್ದಾರೆ.
ಬೌಲಿಂಗ್ ವಿಭಾಗದಲ್ಲಿ ಮೊಹ್ಮದ್ ಶಮಿ ಗಾಯಗೊಂಡು ನಡೆದಿರುವುದರಿಂದ ವೇಗಿ ಉಮ್ರಾನ್ ಮಲ್ಲಿಕ್ಗೆ ಅವಕಾಶ ನೀಡಲಾಗಿದೆ. ದೀಪಕ್ ಚಾಹರ್, ಮೊಹ್ಮದ್ ಸೀರಾಜ್ ಮತ್ತು ಶಾರ್ದೂಲ್ ಠಾಕೂರ್ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇನ್ನು ಬಾಂಗ್ಲಾ ತಂಡವನ್ನು ಲಿಟನ್ ದಾಸ್ ಮುನ್ನಡೆಸಲಿದ್ದಾರೆ. ವೇಗಿ ತಸ್ಕಿನ್ ಅಹ್ಮದ್ ಕಠಿಣ ಸವಾಲು ಎದುರಿಸಲಿದ್ದಾರೆ. ಮುಸ್ತಾಫಿಜುರ್ ರೆಹಮಾನ್, ಎಬೊಡೊತ್ ಹುಸೇನ್, ಶಕೀಬ್ ಅಲ್ ಹಸನ್ ಒಳ್ಳೆಯ ಲಯದಲ್ಲಿದ್ದಾರೆ.
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆ.ಎಲ್.ರಾಹುಲ್ (ಉಪನಾಯಕ), ಶಿಖರ್ ಧವನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಬ್ ಪಂತ್ (ವಿಕೆಟ್ ಕೀಪರ್), ಇಶನ್ ಕಿಶನ್ (ವಿಕೆಟ್ ಕೀಪರ್), ರಜತ್ ಪಟಿಧಾರ್, ಅಕ್ಸರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲದೀಪ್ ಸೇನ್, ಉಮ್ರಾನ್ ಮಲ್ಲಿಕ್, ದೀಪಕ್ ಚಾಹರ್, ಶಾರ್ದೂಲ್ ಠಾಕೂರ್, ಶಾಹಬಾಜ್ ಅಹ್ಮದ್, ಮೊಹ್ಮದ್ ಸೀರಾಜ್.
ಬಾಂಗ್ಲಾದೇಶ ತಂಡ: ಲಿಟನ್ ದಾಸ್ (ನಾಯಕ), ಅನಮುಲ್ ಹಾಗ್, ಶಕೀಬ್ ಅಲ್ ಹಸನ್, ಮುಷಿಫೀಕುರ್ ರಹೀಮ್ (ವಿಕೆಟ್ ಕೀಪರ್), ಆಫೀಫ್ ಹೋಸೇನ್, ಯಾಸೀರ್ ಅಲಿ ಚೌಧರಿ, ಮೆಹಿದಿ ಹಸನ್, ಮುಸ್ತಾಫಿಜುರ್ ರೆಹಮಾನ್, ತಸ್ಕಿನ್ ಅಹ್ಮದ್, ಹಸನ್ ಮೊಹ್ಮದ್, ಎಬೊಡೊತ್ ಹೊಸೇನ್, ನಾಸೂಮ್ ಅಹ್ಮದ್, ಮೊಹದ್ ಹುಲ್ಲಾಘಿ, ನಜ್ಮುಲ್ ಹೋಸೇನ್ ಶಾಂಟೊ, ಕ್ವಾಜಿ ನೂರುಲ್ ಹಸನ್, ಶೌರಿಫುಲ್ ಇಸ್ಲಾಮ್.
ಪಂದ್ಯ : ಬೆಳಗ್ಗೆ 11.30
ನೇರ ಪ್ರಸಾರ: ಸೋನಿ ಸ್ಪೋರ್ಟ್ಸ್