Karnataka Politics : ರಾಜ್ಯ ಚುನಾವಣೆಗೆ ಗುಜರಾತ್ ಎಲೆಕ್ಷನ್ ದಿಕ್ಸೂಚಿ ಅಲ್ಲ – ಸಿದ್ದರಾಮಯ್ಯ
ರಾಜ್ಯದಲ್ಲಿ 2023 ರ ಚುನಾವಣೆಗೆ ಈಗಾಗಲೇ ಕಾಂಗ್ರೆಸ್ ಬಿಜೆಪಿ ಭಾರೀ ತಯಾರಿ ಮಾಡಿಕೊಳ್ತಿವೆ..
ಇತ್ತೀಚೆಗೆ ಗುಜರಾತ್ ನಲ್ಲಿ ವಿಧಾನಸಭಾ ಚುನಾವಣೆ ನಡೆದಿದ್ದು , ಸಮೀಕ್ಷಾ ವರದಿ ಪ್ರಕಾರ ಗುಜರಾತ್ ಮತ್ತೆ ಗೆಲುವಿನ ನಗೆ ಬೀರುವ ಸಾಧ್ಯತೆಯೇ ಹೆಚ್ಚಾಗಿದೆ..
ಇದರ ಬೆನ್ನಲ್ಲೇ ರಾಜ್ಯದಲ್ಲೂ ಕಮಲ ಅರಳಬಹುದೆಂಬ ಚರ್ಚೆಗಳಿಗೆ ವಿಪಕ್ಷ ನಾಯಕ , ಮಾಜಿ ಸಿಎಂ ಸಿದ್ದರಾಮಯ್ಯ ಅವರು ಪ್ರತಿಕ್ರಿಯೆ ನೀಡುತ್ತಾ ಗುಜರಾತ್ ಚುನಾವಣೆ ಕರ್ನಾಟಕಕ್ಕೆ ದಿಕ್ಸೂಚಿಯಲ್ಲ ಎಂದು ಹೇಳಿದರು.
ಗುಜರಾತ್ ಫಲಿತಾಂಶಗಳು ಸೂಚಕವಾಗಿದ್ದರೆ, ಹಿಮಾಚಲ ಪ್ರದೇಶ ಏನು.. ಪಂಜಾಬ್ ಬಗ್ಗೆ ಏನು ಎಂದು ಪ್ರಶ್ನಿಸಿದ ಅವರು, ಒಂದು ರಾಜ್ಯದ ಚುನಾವಣೆಗೂ ಇನ್ನೊಂದು ರಾಜ್ಯಕ್ಕೂ ಸಂಬಂಧವಿಲ್ಲ. ಸಮಸ್ಯೆಗಳು, ಆಡಳಿತ ಮತ್ತು ಜನರ ಭಾವನೆಗಳು ವಿಭಿನ್ನವಾಗಿರುತ್ತವೆ ಎಂದು ಹೇಳಿದ್ದಾರೆ..